ಪಾಲಕ್ಕಾಡ್ ಪುರಸಭೆ ಕಟ್ಟಡದ ಮೇಲೆ ಬ್ಯಾನರ್ 
ದೇಶ

ಕೇರಳ: ಪಾಲಕ್ಕಾಡ್ ಪುರಸಭೆ ಕಟ್ಟಡದ ಮೇಲೆ 'ಜೈ ಶ್ರೀ ರಾಮ್' ಬ್ಯಾನರ್, ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲು

ಇತ್ತೀಚಿಗೆ ನಡೆದ ಪಲಕ್ಕಾಡ್ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಪುರಸಭೆ ಕಚೇರಿ ಮೇಲೆ ಜೈ ಶ್ರೀ ರಾಮ್' ಮತ್ತು 'ವಂದೇ ಮಾತರಂ' ಎಂಬ ಘೋಷಣೆ ಇರುವ ಎರಡು ಬ್ಯಾನರ್ ಗಳನ್ನು ಹಾಕಿದ್ದ ಆರೋಪದ ಮೇರೆಗೆ ಕೆಲ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಪಲಕ್ಕಾಡ್: ಇತ್ತೀಚಿಗೆ ನಡೆದ ಪಾಲಕ್ಕಾಡ್ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಪುರಸಭೆ ಕಚೇರಿ ಮೇಲೆ ಜೈ ಶ್ರೀ ರಾಮ್' ಮತ್ತು 'ವಂದೇ ಮಾತರಂ' ಎಂಬ ಘೋಷಣೆ ಇರುವ ಎರಡು ಬ್ಯಾನರ್ ಗಳನ್ನು ಹಾಕಿದ್ದ ಆರೋಪದ ಮೇರೆಗೆ ಕೆಲ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಪುರಸಭೆ ಕಾರ್ಯದರ್ಶಿ ದೂರು ದಾಖಲಿಸಿದ ನಂತರ ಕೇಸ್ ನ್ನು ದಾಖಲಿಸಲಾಗಿದೆ. ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಸಂಜೆ ಪುರಸಭೆ ಎದುರು ನಡೆದ ವಿಜಯೋತ್ಸವದ ಸಂದರ್ಭದಲ್ಲಿ, ಪುರಸಭೆ ಕಟ್ಟಡ ಮೇಲೆ ಮಲಯಾಳಂನಲ್ಲಿ ಬರೆದ 'ಜೈ ಶ್ರೀ ರಾಮ್' ಮತ್ತು ಕಟ್ಟಡದ ಮೇಲ್ಬಾಗದಲ್ಲಿ ಹಾಕಲಾದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಬೃಹತ್ ಚಿತ್ರದೊಂದಿಗೆ ಕೆಲ ಬಿಜೆಪಿ ಕಾರ್ಯಕರ್ತರು ಇರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇರುವ ಮತ್ತೊಂದು ಬ್ಯಾನರ್ ವೊಂದನ್ನು ಸಹ ಅನಾವರಣಗೊಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ವಿಶೇಷ ವಿಭಾಗದ ಉಪ ಮಹಾನಿರ್ದೇಶಕರು ಸೂಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ದಾಸ್ ಎಸ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ಪುರಸಭೆ ಚುನಾವಣೆಯಲ್ಲಿ 52 ವಾರ್ಡ್ ಗಳ ಪೈಕಿಯಲ್ಲಿ 28 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್