ಪ್ರಧಾನಿ ನರೇಂದ್ರ ಮೋದಿ 
ದೇಶ

ದೇಶದ ಅಭಿವೃದ್ಧಿಯಲ್ಲಿ ಟಾಟಾ ಸಮೂಹದ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ!

ದೇಶದ ಅಭಿವೃದ್ಧಿಯಲ್ಲಿ ಟಾಟಾ ಸಮೂಹದ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದ್ದಾರೆ.ಅಸೋಚಾಮ್ ಫೌಂಡೇಷನ್ ವೀಕ್ 2020 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 100 ವರ್ಷಗಳಲ್ಲಿ ಕೈಗಾರಿಕಾ ಚೇಂಬರ್ ದೇಶದ ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ದೇಶದ ಅಭಿವೃದ್ಧಿಯ ಏರಿಳಿತಗಳಿಗೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು.

ನವದೆಹಲಿ: ದೇಶದ ಅಭಿವೃದ್ಧಿಯಲ್ಲಿ ಟಾಟಾ ಸಮೂಹದ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದ್ದಾರೆ.
ಅಸೋಚಾಮ್ ಫೌಂಡೇಷನ್ ವೀಕ್ 2020 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 100 ವರ್ಷಗಳಲ್ಲಿ ಕೈಗಾರಿಕಾ ಚೇಂಬರ್ ದೇಶದ ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ದೇಶದ ಅಭಿವೃದ್ಧಿಯ ಏರಿಳಿತಗಳಿಗೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು.

ದೇಶದ ಪ್ರಗತಿಗಾಗಿ ವ್ಯವಹಾರ ಗುಂಪಿನಲ್ಲಿ ಮಹತ್ತರ ಕೂಡುಗೆಗಾಗಿ  ರತನ್ ಟಾಟಾ ಅವರಿಗೆ  'ಅಸ್ಸೋಚಾಮ್ ಎಂಟರ್‌ಪ್ರೈಸ್ ಆಫ್ ದಿ ಸೆಂಚುರಿ ಅವಾರ್ಡ್' ಪ್ರದಾನ ಮಾಡಿ ಮಾತನಾಡಿದ ನರೇಂದ್ರ ಮೋದಿ, ದೇಶದ ಅಭಿವೃದ್ಧಿಯಲ್ಲಿ ಟಾಟಾ ಸಮೂಹ ಪ್ರಮುಖ ಪಾತ್ರ ವಹಿಸಿದೆ ಎಂದರು.

ಕೊರೋನಾ ಸಾಂಕ್ರಾಮಿಕದಂತಹ ಸಂಕಷ್ಟದ ಸಂದರ್ಭದಲ್ಲಿ ದೇಶವನ್ನು ಮುಂಚೂಣಿ ರಾಷ್ಟ್ರವಾಗಿ ನಡೆಸಿದ್ದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಟಾಟಾ ಸಮೂಹದ ಮುಶ್ಯಸ್ಥ ರತನ್ ಟಾಟಾ, ಮೋದಿ ಅವರ ಸದೃಢ ನಾಯಕತ್ವದ ಪ್ರಯೋಜಕತ್ವವನ್ನು ಉದ್ಯಮ ಮುಂದೆ ಪಡೆದುಕೊಳ್ಳಲಿವೆ ಎಂದು ಹೇಳಿದರು.

ಲಾಕ್ ಡೌನ್ ಸಂದರ್ಭದಲ್ಲಿ ದೀಪವನ್ನು ಹಾರಿಸಿ ನಾವೆಲ್ಲ ಒಂದೇ ಎಂಬ ಐಕ್ಯತೆಯನ್ನು ಪ್ರದರ್ಶಿಸಿದ್ದೀರಿ, ಕೈಗಾರಿಕಾ ಉದ್ಯಮಿಗಳಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯೋಜಕತ್ವವನ್ನು ಪಡೆದುಕೊಳ್ಳಬೇಕಾಗಿದೆ. ಅದನ್ನು ನಾವು ಮಾಡುತ್ತೇವೆ ಎಂಬ ವಿಶ್ವಾಸವಿದೆ. ಎಲ್ಲರೂ ಒಗ್ಗಟ್ಟಾಗಿದ್ದರೆ ದೇಶ ನಮ್ಮತ್ತ ತಿರುಗಿ ನೋಡುವಂತೆ ಮಾಡಬಹುದು ಟಾಟಾ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಒಂದು ಸಿದ್ಧಾಂತ, ಸಿದ್ಧಾಂತಗಳು ಎಂದಿಗೂ ಸಾಯಲ್ಲ: 140ನೇ ಸಂಸ್ಥಾಪನಾ ದಿನದಂದು ಮಲ್ಲಿಕಾರ್ಜುನ ಖರ್ಗೆ

ಮೇಘಾಲಯ ಮೂಲಕ ಉಸ್ಮಾನ್ ಹಾದಿ ಕೊಲೆಯ ಪ್ರಮುಖ ಹಂತಕರು ಭಾರತಕ್ಕೆ ಪಲಾಯನ: ಬಾಂಗ್ಲಾ ಪೊಲೀಸರು

ಅಯೋಧ್ಯೆ ರಾಮಮಂದಿರಕ್ಕೆ ಚಂದ್ರಬಾಬು ನಾಯ್ಡು ಭೇಟಿ, ದಕ್ಷಿಣ ಭಾರತದ ಮೊದಲ ಸಿಎಂ!

'ಜನ ನಾಯಗನ್' ನನ್ನ ಕೊನೆಯ ಸಿನಿಮಾ: ಮುಂದಿನ 30 ವರ್ಷ ನಿಮ್ಮ ಋಣ ತೀರಿಸಲು ದುಡಿಯುತ್ತೇನೆ - ನಟ ವಿಜಯ್

'ನಂಗೇನೂ ಆಗಲ್ಲ...' ಅತ್ಯಾಚಾರ ಸಂತ್ರಸ್ಥೆಯ ಪದೇ ಪದೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ BJP ನಾಯಕಿಯ ಪತಿ, Video

SCROLL FOR NEXT