ದೇಶ

ನವದೆಹಲಿಯ ಗುರುದ್ವಾರ ರಾಕಬ್‌ಗಂಜ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

Manjula VN

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗುರುದ್ವಾರ ರಾಕಬ್‌ಗಂಜ್‌ಗೆ ಭಾನುವಾರ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಗುರು ತೇಜ್ ಬಹದ್ದೂರ್ ಅವರ ಸರ್ವೋಚ್ಚ ತ್ಯಾಗಕ್ಕೆ ಗೌರವ ಸಲ್ಲಿಸಿದರು.

ಹಠಾತ್ ಭೇಟಿಯು ಗುರುದ್ವಾರ ಅಧಿಕಾರಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಭಕ್ತರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಈ ಭೇಟಿಗೆ ಯಾವುದೇ ಪೊಲೀಸ್ ವ್ಯವಸ್ಥೆ ಮಾಡಲಾಗಿಲ್ಲ ಅಥವಾ ಸಂಚಾರದಲ್ಲಿ ಕೂಡ ಅಡೆತಡೆಗಳನ್ನು  ಮಾಡಲಾಗಿಲ್ಲ.

ನಿನ್ನೆ ಗುರು ತೇಜ್ ಬಹದ್ದೂರ್ ಅವರ ಶಹೀದ್ ದಿವಸ್‌‌ ಆಗಿದ್ದು, ಪ್ರಧಾನಿ ಗೌರವ ಸಲ್ಲಿಸಿದ್ದರು ಮತ್ತು ನ್ಯಾಯಯುತ ಮತ್ತು ಸಮಗ್ರ ಸಮಾಜಕ್ಕಾಗಿ ಅವರು ಹೊಂದಿದ್ದ ದೃಷ್ಟಿಯನ್ನು ಸ್ಮರಿಸಿಕೊಂಡರು.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಇಂದು ಬೆಳಿಗ್ಗೆ ತಾವು ಗುರುದ್ವಾರ ರಕಾಬ್ ಗಂಜ್ ಸಾಹಿಬ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ, ಅಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ಪ್ರಾರ್ಥೀವ ಶರೀರವನ್ನು ಅಂತ್ಯಕ್ರಿಯೆ ಮಾಡಲಾಗಿದೆ. ತಾವು ಅವರಿಂದ ಆಶೀರ್ವಾದ ಪಡೆದಿದ್ದೇನೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಗುರು ತೇಜ್ ಬಹದ್ದೂರ್ ಜಿ ಅವರ ದಯೆಯಿಂದ ಪ್ರೇರಿತರಾದ ರೀತಿಯಲ್ಲೇ ತಾವು ಕೂಡ ಅವರಿಂದ ಸ್ಪೂರ್ತಿ ಪಡೆದಿದ್ದೇನೆ, ''ಎಂದು ಹೇಳಿದ್ದಾರೆ. 

ಒಂಬತ್ತನೇ ಸಿಖ್ ಗುರುವಾದ ಗುರು ತೇಜ್ ಬಹದ್ದೂರ್ 1621 ರಲ್ಲಿ ಜನಿಸಿದರು ಮತ್ತು 1675 ರಲ್ಲಿ ದೆಹಲಿಯಲ್ಲಿ ಹುತಾತ್ಮರಾದರು

SCROLL FOR NEXT