ದೇಶ

ಜಮ್ಮು-ಕಾಶ್ಮೀರ: ಅಲ್-ಬಾದರ್ ಉಗ್ರ ಸಂಘಟನೆಗೆ ಸೇರಿದ 4 ಭಯೋತ್ಪಾದಕರ ಬಂಧನ, ಶಸ್ತ್ರಾಸ್ತ್ರಗಳು ವಶಕ್ಕೆ

Manjula VN

ಅವಂತಿಪೋರಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಅಲ್-ಬಾದರ್ ಉಗ್ರ ಸಂಘಟನೆಯ ನಾಲ್ವರು ಭಯೋತ್ಪಾದಕರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಅವಂತಿಪೋರಾದ ಲರ್ಮೋಹ್ ಹಾಗೂ ದದ್ಸರಾ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿದುಬರುತ್ತಿದ್ದಂತೆಯೇ 42 ಆರ್ ಆರ್ ಹಾಗೂ 130 ಬಿಎನ್ ಸಿಆರ್'ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದವು. 

ಕಾರ್ಯಾಚರಣೆ ವೇಳೆ ನಾಲ್ವರು ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತ ಉಗ್ರರಿಂದ ಎಕೆ-56 ರೈಫಲ್, ನಿಯತಕಾಲಿಕೆಗಳು, 28 ಎಕೆ-56 ರೈಫಲ್ಸ್ ಗಳ ಗುಂಡುಗಳು, ಹ್ಯಾಂಡ್ ಗ್ರೆನೇಡ್ ಗಳನ್ನು ವಶಕ್ಕೆ ಪಡೆಯಲ್ಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಂಧಿತ ಉಗ್ರರನ್ನು ಯವರ್ ಅಜೀಜ್ ದಾರ್, ಸಜಾದ್ ಅಹ್ಮದ್ ಪರೇ, ಅಬಿದ್ ಮಜೀದ್ ಶೇಖ್ ಮತ್ತು ಶೋಕತ್ ಅಹ್ಮದ್ ದಾರ್ ಎಂದು ಗುರ್ತಿಸಲಾಗಿದೆ. 

SCROLL FOR NEXT