ದೇಶ

ಹಿಂದೂಮಹಾಸಾಗರದಲ್ಲಿ ಹೆಚ್ಚಿದ ಚೀನಾದ ಚಟುವಟಿಕೆ: ಭಾರತಕ್ಕೆ ಬೇಕಿದೆ 3ನೇ ವಿಮಾನವಾಹಕ ನೌಕೆ!

Srinivas Rao BV

ನವದೆಹಲಿ: ಹಿಂದೂಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾ ಚಟವಟಿಕೆಗಳ ದೃಷ್ಟಿಯಿಂದ ಭಾರತಕ್ಕೆ ಮೂರನೇ ವಿಮಾನವಾಹನ ನೌಕೆಯ ಅಗತ್ಯವಿದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಯುದ್ಧ ತಾಂತ್ರಿಕ ಕಾರಣದಿಂದಾಗಿ ಭಾರತಕ್ಕೆ ಮೂರು ವಿಮಾನವಾಹಕ ನೌಕೆಗಳ ಅಗತ್ಯವಿದ್ದು, ಒಂದು ಪೂರ್ವ ಹಾಗೂ ಮತ್ತೊಂದು ಪಶ್ಚಿಮ ಸಮುದ್ರ ಪ್ರದೇಶದಲ್ಲಿ ಯಾವಾಗಲೂ ಸನ್ನದ್ಧವಾಗಿರಬೇಕು ಮೂರನೆಯದ್ದು ಬದಲಿ ವ್ಯವಸ್ಥೆಯಾಗಿ ಬಳಕೆ ಮಾಡುವುದಕ್ಕೆ ಸಿದ್ಧವಿರಬೇಕು ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನು ನಿರಾಕರಿಸುವುದಕ್ಕೆ ಆರ್ಥಿಕ ಮುಗ್ಗಟ್ಟು ಕಾರಣವಾಗಿರಬೇಕಷ್ಟೇ ಎಂದು ಅವರು ಹೇಳಿದ್ದಾರೆ. ಭಾರತದ ಬಳಿ ಈಗ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಸೇವೆಯಲ್ಲಿದ್ದರೆ, ಮತ್ತೊಂದು ದೇಶೀಯವಾಗಿ ನಿರ್ಮಿಸಲಾಗಿರುವ ಐಎನ್ಎಸ್ ವಿಕ್ರಾಂತ್ 2022 ಕ್ಕೆ ಸೇರ್ಪಡೆಯಾಗಲಿದೆ.

ಈ ತಿಂಗಳ ಪ್ರಾರಂಭದಲ್ಲಿ ಕೋಲ್ಕತ್ತಾದಲ್ಲಿ ಮಾತನಾಡಿದ್ದ ಸಿಡಿಎಸ್ ಬಿಪಿನ್ ರಾವತ್, ಜಲಾಂತರ್ಗಾಮಿಗಳು ಹಾಗೂ ವಿಮಾನ ವಾಹಕ ನೌಕೆಗಳ ಅನುಕೂಲ ಹಾಗೂ ಅನನುಕೂಲಗಳನ್ನು ಹೊಂದಿವೆ ಎಂದು ಹೇಳಿದ್ದರು.

ಭೂಮಿಯಿಂದ ಫೈಟರ್ ಜೆಟ್ ಗಳು ಕಾರ್ಯಾಚರಣೆ ನಡೆಸುವುದಕ್ಕೆ ಕೆಲವು ಮಿತಿಗಳನ್ನು ಹೊಂದಿರುತ್ತವೆ. ವಿಮಾನ ವಾಹಕ ನೌಕೆಗಳು ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT