ರಾಮದಾಸ್ ಅಠಾವಳೆ 
ದೇಶ

ನೋ ಕೊರೋನಾ ನೋ: ರೂಪಾಂತರಿ ಕರೋನಾಗೆ ರಾಮದಾಸ್ ಅಠಾವಳೆ ಹೊಸ ಘೋಷಣೆ

ಗೋ ಕೊರೋನಾ ಗೋ’ ಎನ್ನುವ ಮೂಲಕ ನಗೆಪಾಟಲಿಗೀಡಾಗಿದ್ದ ಕೇಂದ್ರ ಮಂತ್ರಿ ರಾಮದಾಸ್‌ ಅಠಾವಳೆ ಭಾನುವಾರ ಬ್ರಿಟನ್ನಿನ ರೂಪಾಂತರಿ ಕೊರೋನಾ ವೈರಸ್‌ ಬಗ್ಗೆ ಪ್ರತಿಕ್ರಿಯಿಸುತ್ತಾ ‘ನೋ ಕೊರೋನಾ’ ಎನ್ನುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಪುಣೆ: ಗೋ ಕೊರೋನಾ ಗೋ’ ಎನ್ನುವ ಮೂಲಕ ನಗೆಪಾಟಲಿಗೀಡಾಗಿದ್ದ ಕೇಂದ್ರ ಮಂತ್ರಿ ರಾಮದಾಸ್‌ ಅಠಾವಳೆ ಭಾನುವಾರ ಬ್ರಿಟನ್ನಿನ ರೂಪಾಂತರಿ ಕೊರೋನಾ ವೈರಸ್‌ ಬಗ್ಗೆ ಪ್ರತಿಕ್ರಿಯಿಸುತ್ತಾ ‘ನೋ ಕೊರೋನಾ’ ಎನ್ನುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಈಗ ಹೊಸ ರೂಪ ಪಡೆದುಕೊಂಡಿರುವ ಕೊರೊನಾ ವೈರಸ್‌ಗೆ 'ನೋ' ಎಂದು ಅಠವಳೆ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ಈ ಹಿಂದೆ ನಾನು 'ಗೋ ಕೊರೊನಾ ಗೋ' ಎಂದು ಹೇಳಿದ್ದೆ. ಆದರೆ, ಅದು ನನ್ನ ಬಳಿಯೂ ಬಂದಿತ್ತು. ಅಂದರೆ, ನನಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ನನ್ನ ಘೋಷಣೆಯಂತೆ ಈಗ ಹಳೆಯ ಕೊರೊನಾ ತೊಲಗುತ್ತಿದೆ. ಹೊಸ ರೂಪ ಪಡೆದುಕೊಂಡು ಬರುತ್ತಿರುವ ಕೊರೊನಾ ವೈರಸ್‌ಗೆ ನಾನು 'ನೋ ಕೊರೊನಾ ನೋ' ಎನ್ನುತ್ತೇನೆ' ಎಂದು ತಿಳಿಸಿದ್ದಾರೆ.

‘ಹಿಂದೆ ನಾನು ಗೋ ಕೊರೋನಾ ಗೋ ಎಂದು ಹೇಳಿದಂತೆಯೇ ಕೊರೋನಾ ವೈರಸ್‌ ಇದೀಗ ತೊಲಗುತ್ತಿದೆ. ಆದರೆ ಅದು ನನ್ನ ಸಮೀಪವೂ ಬಂದಿತ್ತು. ನನಗೂ ಸೋಂಕು ದೃಢಪಟ್ಟಿತ್ತು. ಸದ್ಯ ರೂಪಾಂತರಿ ಕೊರೋನಾ ವೈರಸ್‌ ಭೀತಿ ಉಂಟಾಗಿದೆ. ಹಾಗಾಗಿ ನಾನು, ‘ನೋ ಕೊರೋನಾ, ನೋ ಕೊರೋನಾ’ ಎಂದು ಹೇಳುತ್ತೇನೆ. ನಮಗೆ ಹಳೆಯ ವೈರಸ್ಸೂ ಬೇಡ, ಹೊಸತೂ ಬೇಡ’ ಎಂದು ಹೇಳಿದ್ದಾರೆ. 

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್‌ ಪತ್ತೆಯಾಗಿದೆ. ಅದು ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗ ಭ್ರಷ್ಟಾಚಾರ ಕುರಿತು ಅಧ್ಯಾಯ ವಿವಾದ: 8ನೇ ತರಗತಿ ಪಠ್ಯಪುಸ್ತಕವನ್ನು ಹಿಂಪಡೆದು ಸಾರ್ವಜನಿಕ ಕ್ಷಮೆಯಾಚಿಸಿದ NCERT

US-Iran conflict: ತೈಲ ಸಾಗಣೆ ನಿಂತರೆ ಇದೂವರೆಗೆ ನಡೆಸಿದ್ದಕ್ಕಿಂತ 20 ಪಟ್ಟು ಹೆಚ್ಚು ದಾಳಿ: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

US-Iran war ಎಫೆಕ್ಟ್: ಪಾಕಿಸ್ತಾನದಲ್ಲಿ ಇಂಧನ ಸಂಕಷ್ಟ; ಶಾಲೆಗಳು 2 ವಾರ ಬಂದ್, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

Epic Fury: ಇರಾನ್‌ನಲ್ಲಿ ಸೈನಿಕ ಕಾರ್ಯಾಚರಣೆ ಸದ್ಯದಲ್ಲೇ ಅಂತ್ಯಗೊಳ್ಳಲಿದೆ: ಡೊನಾಲ್ಡ್ ಟ್ರಂಪ್

ಆಹಾರ, ಶೂ, ಸಮವಸ್ತ್ರ ಎಲ್ಲಾ ಸೌಲಭ್ಯಗಳಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ: ಸರ್ಕಾರ ವಿಷಾದ

SCROLL FOR NEXT