ದೇಶ

ಕ್ರೀಡಾ ಸ್ಪರ್ಧೆಗಳ ಆಯೋಜನೆಗೆ ಸರ್ಕಾರದ ಅನುಮತಿ: ಮಾರ್ಗಸೂಚಿ ಬಿಡುಗಡೆ

Nagaraja AB

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶದಲ್ಲಿ ಸ್ಥಗಿತಗೊಂಡಿದ್ದ ಕ್ರೀಡಾ ಸ್ಪರ್ಧೆಗಳ ಆಯೋಜನೆಗೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. 

ಸ್ಥಳೀಯ ಪ್ರಾಧಿಕಾರದ ನಿರ್ಬಂಧವಿಲ್ಲದಿದ್ದಲ್ಲಿ, ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬಹುದು. ಆದರೆ, ಕ್ರೀಡೆಯನ್ನು ಅವಲಂಬಿಸಿ ಸ್ಪರ್ಧಿಗಳು 6 ಅಡಿ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಎಲ್ಲಾ ಸಮಯದಲ್ಲಿ ಮುಖದ ಮಾಸ್ಕ್ ಧರಿಸಬೇಕು.

ಸ್ಪರ್ಧಿಗಳು ಆಗಾಗ್ಗೆ ಸೋಪಿನಿಂದ ಕೈ ತೊಳೆದುಕೊಳ್ಳಬೇಕು.ಆಲ್ಕೋಹಾಲ್‌ ಇರುವ ಸ್ಯಾನಿಟೈಸರ್‌ ಬಳಸಬೇಕು.ಕ್ರೀಡಾ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. 

ಕ್ರೀಡಾಸ್ಥಳವನ್ನು ನಿಯಮಿತವಾಗಿ ಸ್ವಚ್ಚಗೊಳಿಸಬೇಕು. ಸ್ವಚ್ಚತಾ ಕಾರ್ಯದಲ್ಲಿ ತೊಡಗುವವರು ಕಡ್ಡಾಯವಾಗಿ ಪಿಪಿಇ ಕಿಟ್‌ಗಳನ್ನು ಧರಿಸಬೇಕು. ಕುಡಿಯುವ ನೀರು ಮತ್ತು ಕೈತೊಳೆಯುವ ಪ್ರದೇಶಗಳನ್ನು ಸ್ವಚ್ಛವಾಗಿರಿಸಬೇಕು.

ಕ್ರೀಡಾ ಸ್ಥಳಗಳಲ್ಲಿನ ಉಪಕರಣಗಳಿಗೆ ಸೋಂಕು ನಿವಾರಕ ದ್ರವಣ ಸಿಂಪಡಣೆ, ಕ್ರೀಡಾಪಟುಗಳಿಗೆ ಕೋವಿಡ್‌ ಮುನ್ನೆಚ್ಚರಿಕೆಯ ಕುರಿತು ಮಾಹಿತಿ, ಸುರಕ್ಷಿತ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು.

SCROLL FOR NEXT