ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 
ದೇಶ

ಕೇರಳ ವಿಧಾನಸಭೆಯಲ್ಲಿ ನೂತನ ಕೃಷಿ ಕಾಯ್ದೆ ವಿರುದ್ಧ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ!

ಕೋವಿಡ್-19 ಶಿಷ್ಟಾಚಾರಗಳ ಮಧ್ಯೆ ವಿಧಾನಸಭೆ ವಿಶೇಷ ಅಧಿವೇಶನ ಕರೆದ ಕೇರಳ ಸರ್ಕಾರ ಗುರುವಾರ ಅವಿರೋಧವಾಗಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ನಿರ್ಣಯ ಹೊರಡಿಸಿದೆ.

ತಿರುವನಂತಪುರಂ: ಕೋವಿಡ್-19 ಶಿಷ್ಟಾಚಾರಗಳ ಮಧ್ಯೆ ವಿಧಾನಸಭೆ ವಿಶೇಷ ಅಧಿವೇಶನ ಕರೆದ ಕೇರಳ ಸರ್ಕಾರ ಗುರುವಾರ ಅವಿರೋಧವಾಗಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ನಿರ್ಣಯ ಹೊರಡಿಸಿದೆ.

ಕೇಂದ್ರ ಸರ್ಕಾರದ ತಿದ್ದುಪಡಿ ಕೃಷಿ ಕಾಯ್ದೆಯನ್ನು ತಿರಸ್ಕರಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಗ್ಗೆ ಸೇರಿದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಿರ್ಣಯ ಮಂಡಿಸಿದರು. 

ಈ ವೇಳೆ ಬಿಜೆಪಿಯ ಶಾಸಕ ಒ ರಾಜಗೋಪಾಲ್ ಒಬ್ಬರೇ ನಿರ್ಣಯದ ವಿರುದ್ಧ ಮಾತನಾಡಿದರು. ಉಳಿದವರೆಲ್ಲರೂ ಬೆಂಬಲ ಸೂಚಿಸಿದ್ದರಿಂದ ವಿಧಾನಸಭಾಧ್ಯಕ್ಷರು ನಿರ್ಣಯವನ್ನು ಅವಿರೋಧವಾಗಿ ಹೊರಡಿಸಿದರು. ಬಿಜೆಪಿ ಶಾಸಕ ನಿರ್ಣಯ ಪರ ಮತ ಹಾಕಲೇಬೇಕಾಯಿತು. ಇವರ ಮತದಾನದಲ್ಲಿ ಏನಾದರೂ ಅಕ್ರಮ ನಡೆಯಿತೇ ಅಥವಾ ಬಿಜೆಪಿ ಶಾಸಕರು ಕೂಡ ಉದ್ದೇಶಪೂರ್ವಕವಾಗಿ ನಿರ್ಣಯ ಪರ ಮತ ಹಾಕಿದರೇ ಎಂದು ತಿಳಿದುಬಂದಿಲ್ಲ.

ಇಂದು ವಿಶೇಷ ಅಧಿವೇಶನ ಕರೆಯಲು ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಒಪ್ಪಿಗೆ ಕೊಟ್ಟಿದ್ದರು.  ವಿಶೇಷ ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಿದ ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ರೈತರ ಹಿತಾಸಕ್ತಿಗೆ ವಿರುದ್ಧವಾಗಿದ್ದು ಕೇರಳ ರಾಜ್ಯಕ್ಕೆ ಕೂಡ ಒಟ್ಟಾರೆಯಾಗಿ ಮಾರಕವಾಗಿದೆ. ಕೇಂದ್ರ ಸರ್ಕಾರ ನೂತನ ಕಾಯ್ದೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ರೈತರ ಪ್ರತಿಭಟನೆ ಹೀಗೆಯೇ ಮುಂದುವರಿದರೆ ಕೇರಳ ರಾಜ್ಯದ ಜನತೆಗೆ ತೊಂದರೆಯಾಗಲಿದೆ. ರೈತರ ಅಭಿಪ್ರಾಯ ಕೇಳದೆ, ಹಲವು ರಾಜ್ಯಗಳ ಪ್ರತಿಕ್ರಿಯೆ ಪಡೆಯದೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕೃಷಿ ಕಾಯ್ದೆಯನ್ನು ತಂದಿದೆ. ಈ ಕಾಯ್ದೆ ರೈತರ ವಿರುದ್ಧವಾಗಿ ಕಾರ್ಪೊರೇಟ್ ಕಂಪೆನಿಗಳ ಪರವಾಗಿದೆ ಎಂದು ಸಿಎಂ ಆರೋಪಿಸಿದರು.

ಕೇಂದ್ರವು ಖರೀದಿ ಮತ್ತು ವಿತರಣಾ ಜಾಲದಿಂದ ಹಿಂದೆ ಸರಿದರೆ, ಅದು ಸರಕುಗಳ ಸಂಗ್ರಹಕ್ಕೆ ಕಾರಣವಾಗುತ್ತದೆ ಮತ್ತು ಅಕ್ರಮ ಕಪ್ಪು ವ್ಯಾಪಾರೋದ್ಯಮಕ್ಕೆ ಕಾರಣವಾಗುತ್ತದೆ. ಅಗತ್ಯ ಸರಕುಗಳ ಕಾಯ್ದೆಯಡಿ ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ತೆಗೆದುಹಾಕುವ ಕೇಂದ್ರದ ನಿರ್ಧಾರವು ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದಲ್ಲದೆ, ಹೊಸ ತಿದ್ದುಪಡಿಯು ಕೃಷಿ ಸರಕುಗಳಿಗೆ ಬೆಂಬಲ ಬೆಲೆಯನ್ನು ನೀಡುವುದರಿಂದ ಕೇಂದ್ರವು ಹಿಂದೆ ಸರಿಯಲು ಅನುವು ಮಾಡಿಕೊಡುತ್ತದೆ, ಇದು ಕೃಷಿ ಕ್ಷೇತ್ರದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಾಟಿಯಿಲ್ಲ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್