ದೇಶ

ಶಬರಿಮಲೆ ಪ್ರಕರಣ: ವಿವಿಧ ಧರ್ಮಗಳಲ್ಲಿ ಮಹಿಳೆಯರ ತಾರತಮ್ಯಕ್ಕೆ ಸಂಬಂಧಿಸಿ ಪ್ರಶ್ನೆಗಳನ್ನು ರೂಪಿಸಲಿರುವ ಸುಪ್ರೀಂ ಕೋರ್ಟ್

Raghavendra Adiga

ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಳ ಪ್ರವೇಶದ ವಿಷಯ ಸೇರಿದಂತೆ ವಿವಿಧ ಧರ್ಮಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯದ ವಿಷಯವನ್ನು ಬಗೆಹರಿಸಲು  ಸುಪ್ರೀಂ ಕೋರ್ಟ್ ಮುಂದಾಗಿದ್ದು ಈ ಸಂಬಂಧ ಸೋಮವಾರ ಮಹತ್ವದ ವಿಚಾರಣೆ ಪ್ರಾರಂಭಿಸಿದೆ. ನ್ಯಾಯಾಲಯವು ದೇವಸ್ಥಾನಕ್ಕೆ, ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ಕುರಿತಂತೆ ಚರ್ಚಿಸಬೇಕಾದ ಪ್ರಶ್ನೆಗಳನ್ನು ರೂಪಿಸಲು ಪ್ರಾರಂಭಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಒಂಬತ್ತು ನ್ಯಾಯಾಧೀಶರ ನ್ಯಾಯಪೀಠವು ನ್ಯಾಯವಾದಿ ಎಫ್.ಎಸ್. ನಾರಿಮನ್ ಸೇರಿದಂತೆ ಹಲವಾರು ಹಿರಿಯ ವಕೀಲರನ್ನು ವಿಚಾರಣೆ ನಡೆಸುತ್ತಿದೆ.

ಕಳೆದ ವರ್ಷ ನವೆಂಬರ್ 14 ರಂದು ಶಬರಿಮಲೆ ಪ್ರಕರಣದಲ್ಲಿ ನೀಡಿದ ತೀರ್ಪಿನ ನಂತರ ವಿವಿಧ ಧರ್ಮಗಳಲ್ಲಿ ಮಹಿಳೆಯರ ತಾರತಮ್ಯಕ್ಕೆ ಸಂಬಂಧಿಸಿದ ಉಲ್ಲೇಖವನ್ನು ವಿಸ್ಕೃತ ಪೀಠಕ್ಕೆ ಸಲ್ಲಿಕೆ ಮಾಡಲಾಗಿತ್ತು.

ಎರಡು ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶ, ದಾವೂಡಿ ಬೋಹ್ರಾ ಮುಸ್ಲಿಂ ಸಮುದಾಯದಲ್ಲಿ ಸ್ತ್ರೀ ಜನನಾಂಗದ ಊನಗೊಳಿಸುವಿಕೆ  ತಮ್ಮ ಧರ್ಮ ಬಿಟ್ಟು ಬೇರೆ ಧರ್ಮೀಯರನ್ನು ವಿವಾಹವಾದ ಪಾರ್ಸಿ ಮಹಿಳೆಯರಿಗೆ ಹಕ್ಕನ್ನು ನಿರಾಕರಿಸುವುದಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳ ಹಿನ್ನೆಲೆಯನ್ನಿಟ್ಟುಕೊಂಡು ನ್ಯಾಯಾಲಯವು ಪ್ರಶ್ನೆಗಳನ್ನು ರೂಪಿಸಲಿದೆ.

SCROLL FOR NEXT