ದೇಶ

ಫೆ. 17ರಂದು ಬಿಜೆಪಿ ಜೊತೆ ಜಾರ್ಖಂಡ್ ವಿಕಾಸ್ ಮೋರ್ಚಾ ವಿಲೀನ 

Sumana Upadhyaya

ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ ನೇತೃತ್ವದ ಜಾರ್ಖಂಡ್ ವಿಕಾಸ್ ಮೋರ್ಚಾ(ಜೆವಿಎಂ) ಭಾರತೀಯ ಜನತಾ ಪಾರ್ಟಿ ಜೊತೆ ವಿಲೀನವಾಗಲಿದ್ದು, ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಅವರು ನಿನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಜಾರ್ಖಂಡ್ ಬಿಜೆಪಿ ಉಸ್ತುವಾರಿ ಓಂ ಮಾಥುರ್ ಸಹ ಇದ್ದರು. 


ಇದೇ 17ರಂದು ರಾಂಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜೆವಿಎಂ ಅಧಿಕೃತವಾಗಿ ಬಿಜೆಪಿ ಸೇರಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಓಂ ಮಾಥುರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 


ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಶಾಸಕ ಪ್ರದೀಪ್ ಯಾದವ್ ಅವರನ್ನು ಬಾಬುಲಾಲ್ ಮರಂಡಿ ಮೊನ್ನೆ 7ರಂದು ಪಕ್ಷದಿಂದ ಹೊರಹಾಕಿದ್ದರು. ಈ ಹಿಂದೆ ಕೂಡ ಮತ್ತೊಬ್ಬ ಶಾಸಕ ಬಂದು ಟಿರ್ಕಿಯವರನ್ನು ಉಚ್ಛಾಟಿಸಲಾಗಿತ್ತು. ಈ ಮೂಲಕ ಬಿಜೆಪಿ ಸೇರ್ಪಡೆಗೆ ಬಾಬುಲಾಲ್ ಮರಂಡಿ ಹಾದಿ ಸುಗಮವಾದಂತಾಗಿದೆ.

ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜೆವಿಎಂ ಮೂರು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಬಾಬುಲಾಲ್ ಮರಂಡಿ, ಪ್ರದೀಪ್ ಯಾದವ್ ಮತ್ತು ಬಂದು ಟಿರ್ಕಿ ಶಾಸಕರಾದರು. ಆದರೆ ಇವರಿಬ್ಬರು ಬಿಜೆಪಿ ಜೊತೆ ಸೇರಲು ವಿರೋಧ ವ್ಯಕ್ತಪಡಿಸಿದ್ದರು.


ಬಿಜೆಪಿ ನೇತೃತ್ವದ ಸರ್ಕಾರ ಬಂದು ಬಾಬುಲಾಲ್ ಮರಂಡಿ ಮುಖ್ಯಮಂತ್ರಿಯಾಗಿದ್ದರು. ಆದರೆ 2006ರಲ್ಲಿ ಪಕ್ಷ ತೊರೆದು ಹೊರಬಂದು ತಮ್ಮದೇ ಹೊಸ ಪಕ್ಷ ಸ್ಥಾಪಿಸಿದ್ದರು.

SCROLL FOR NEXT