ದೇಶ

ಕೇಜ್ರೀವಾಲ್ ಬಾಯಲ್ಲೀಗ ದೇಶ, ಹನುಮಂತ, ಭಾರತ ಮಾತೆ,: 2024ರ ಲೋಕಸಭೆಯಲ್ಲಿ ಮೋದಿಗೆ ಸೆಡ್ಡು ಹೊಡಿತ್ತಾರಾ?

Vishwanath S

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಆಮ್ ಆದ್ಮಿ ಪಕ್ಷ  (ಎಎಪಿ) ಕಚೇರಿಯಲ್ಲಿ ಮಂಗಳವಾರ ಬೃಹತ್ ಫಲಕವೊಂದನ್ನು ಪ್ರದರ್ಶಿಸಲಾಗಿತ್ತು? ಅದರಲ್ಲಿ 'ದೇಶ ನಿರ್ಮಾಣಕ್ಕಾಗಿ ಎಎಪಿ ಜೊತೆ ಪಾಲುದಾರರಾಗಿ' ಎಂಬ  ಸಂದೇಶ  ಕಂಗೊಳಿಸುತ್ತಿತ್ತು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು  ಸಾಧಿಸಿದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾತುಗಳಲ್ಲಿ, ಹಲವು ಬಾರಿ 'ದೇಶ ಎಂಬ ಪದ ಪ್ರಸ್ತಾಪಿಸಿದ್ದಾರೆ. ಮತ್ತೊಂದೆಡೆ ತಮ್ಮ ಭಾಷಣದಲ್ಲಿ ಭಗವಾನ್ ಹನುಮಂತ,   ಭಾರತ ಮಾತೆಗೂ, ಕೂಡಾ ಸ್ಥಾನ ಕಲ್ಪಿಸಿದರು. ಇವೆಲ್ಲವುಗಳ ಜತೆಗೆ ಶಾಲೆ, ಆಸ್ಪತ್ರೆ, ಅಗ್ಗದ ವಿದ್ಯುತ್, ಕುಡಿಯುವ ನೀರು, ರಸ್ತೆ ಮತ್ತಿತರ ಅಭಿವೃದ್ದಿ ಕಾರ್ಯಕ್ರಮ ಮರೆಯದೆ ಪ್ರಸ್ತಾಪಿಸಿದರು.

ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷವನ್ನು ಮತ್ತೊಮ್ಮೆ ದೇಶಾದ್ಯಂತ ವಿಸ್ತರಿಸಲು ಪ್ರಯತ್ನಿಸುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ೨೦೧೪ ರ ಲೋಕಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ರಾಜಕೀಯದಲ್ಲಿ ಮಿಂಚಲು ಪ್ರಯತ್ನ ನಡೆಸಿತ್ತು. ದೇಶಾದ್ಯಂತ ಕೋಟಿ ಮಂದಿ ಸದಸ್ಯರನ್ನು ನೋಂದಾಯಿಸಲು ವಿಶೇಷ ಕಾರ್ಯಕ್ರಮ  ಆಯೋಜಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ದೆಹಲಿ ಚುನಾವಣೆಯಲ್ಲಿ ಈಗ ಲಭಿಸಿರುವ ಭರ್ಜರಿ ಗೆಲವು ಕೇಜ್ರಿವಾಲ್ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಸುವ ಸಾಧ್ಯತೆಗಳು ಕಂಡು ಬರುತ್ತಿವೆ. ಗೆಲುವಿನ ಉತ್ಸಾಹದಲ್ಲಿ ಮಾತನಾಡಿದ ಕೇಜ್ರೀವಾಲ್, ನಮಗೆ ಹನುಮಂತನ ಆರ್ಶಿವಾದವಿದೆ, ನಮ್ಮನ್ನು ಆರ್ಶಿವದಿಸಿದ್ದಕ್ಕಾಗಿ ಹನುಮಂತನಿಗೆ ಧನ್ಯವಾದ ಸಲ್ಲಿಸಿದರು. 

ಕಳೆದ ಐದು ವರ್ಷಗಳಲ್ಲಿ  ನಮಗೆ ಕೆಲಸ ಮಾಡಲು ಭಗವಾನ್ ಹನುಮಂತ ಶಕ್ತಿ ನೀಡಿ ಸಲುಹಿದ್ದಾನೆ. ಮುಂದಿನ ಐದು ವರ್ಷಗಳಲ್ಲೂ ದೊಡ್ಡ ಶಕ್ತಿ ಕಲ್ಪಿಸಬೇಕೆಂದು ಪ್ರಾರ್ಥನೆ ಸಲ್ಲಿಸಿದರು. ದೆಹಲಿ ಚುನಾವಣೆ  ಫಲಿತಾಂಶ ಹೊರ ಬೀಳುತ್ತಿದ್ದಾಗ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷಕ್ಕೆ ಮತ ನೀಡುವ ಮೂಲಕ ದೆಹಲಿ ಮತದಾರರು ದೇಶವನ್ನು ಹೊಸ ಬ್ರಾಂಡ್ ರಾಜಕಾರಣದತ್ತ ಕೊಂಡೊಯ್ದಿದ್ದಾರೆ.

ಎಎಪಿ ಗೆಲುವು ದೇಶಕ್ಕೆ ಅದೃಷ್ಟವನ್ನು ತರಲಿದೆ. ತಮ್ಮ ವಸತಿ ಪ್ರದೇಶಗಳಲ್ಲಿ ಉತ್ತಮ ಶಾಲೆಗಳು, ಆಸ್ಪತ್ರೆಗಳು, ಅಗ್ಗದ ವಿದ್ಯುತ್, ಕುಡಿಯುವ ನೀರು ಮತ್ತು ರಸ್ತೆಗಳನ್ನು ಕಲ್ಪಿಸುವ  ಪಕ್ಷಕ್ಕೆ ಮಾತ್ರ ಮತ ಜನರು ಚಲಾಯಿಸುತ್ತಾರೆ ಎಂಬ ಸೂಚನೆ ನೀಡಿದ್ದಾರೆ. ಇದೊಂದು ಶುಭ ಸೂಚನೆ, ದೇಶದ ರಾಜಕಾರಣಕ್ಕೆ ಬಹಳ ಅದೃಷ್ಟದ ಸೂಚನೆಯಾಗಿದ್ದು, ಇಂತಹ ರಾಜಕೀಯ ದೇಶವನ್ನು 21 ನೇ ಶತಮಾನಕ್ಕೆ ಕೊಂಡೊಯ್ಯಲಿದೆ ಎಂದರು.

ಕೇಜ್ರಿವಾಲ್ ಅವರ ಮಾತಿನಲ್ಲಿ ಪದೇ ಪದೇ ದೇಶ ಎಂದು  ಹೇಳುವುದನ್ನು ನೋಡಿದರೆ,  ರಾಷ್ಟ್ರೀಯ ನಾಯಕರಾಗಿ  ಹೊರಹೊಮ್ಮಬೇಕೆಂಬ ಅವರಲ್ಲಿನ ಆಕಾಂಕ್ಷೆ ಮತ್ತೊಮ್ಮೆ ಅನಾವರಣಗೊಂಡಿದೆ. ಈ ಸೂಚನೆಗಳಿಗೆ ಪೂರಕವಾಗಿ ಆಮ್ ಆದ್ಮಿ ಪಕ್ಷದ  ಸಾಮಾಜಿಕ  ಮಾಧ್ಯಮಗಳು ಕ್ರಾಂತಿಗೆ ಸೇರಿ, ಎಎಪಿಗೆ ಸೇರಿ ಎಂಬ ಘೋಷಣೆ ಮೊಳಗಿಸಿವೆ.

SCROLL FOR NEXT