ದೇಶ

ಆಂಧ್ರ ಪ್ರದೇಶ: ಕೊರೋನಾ ವೈರಸ್ ಇದೆಯೆಂದು ತಿಳಿದು ಊರನ್ನು ರಕ್ಷಿಸಲು ವ್ಯಕ್ತಿ ಆತ್ಮಹತ್ಯೆ

Shilpa D

ಚಿತ್ತೂರ್ :  ತನಗೆ ಕೊರೊನಾ ವೈರಸ್ ಬಂದಿದೆ ಎಂದು ತಿಳಿದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಬಾಲಕೃಷ್ಣ(50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶೇಷಮ್ನಾಯುದಕಂಡ್ರಿಗ ಗ್ರಾಮದ ನಿವಾಸಿಯಾಗಿರುವ ಬಾಲಕೃಷ್ಣ ಹೃದಯ ಬಡಿತದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ತಿರುಪತಿಯ ರುಯಾ ಆಸ್ಪತ್ರೆಗೆ ತೆರಳಿದ್ದರು.

ವೈದ್ಯರು ಬಾಲಕೃಷ್ಣ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಯಾವುದೋ ವೈರಸ್‍ನ ಲಕ್ಷಣ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರು ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆದಿದ್ದರು.

ಆತನಿಗೆ ವೈದ್ಯರು ಯಾವುದೇ ಸೋಂಕಿನಿಂದ ಪಾರಾಗಲು ಮಾಸ್ಕ್ ಧರಿಸುವಂತೆ ಸೂಚಿಸಿದ್ದರು. ಆದರೆ ತನಗೆ ಕೊರೊನಾ ವೈರಸ್ ಇದೆಯೆಂದು ತಪ್ಪಾಗಿ ತಿಳಿದಿದ್ದ.

ತನಗೆ ಕೊರೊನಾ ವೈರಸ್ ಇದೇ ಹಾಗಾಗಿ ಯಾರೂ ತನ್ನ ಬಳಿ ಬರಬಾರದು ಎಂದು ಊರಿನವರಿಗೆ ಆತ ಹೇಳಿದ್ದ ಎನ್ನಲಾಗಿದೆ. ನಂತರ ತನ್ನಿಂದಾಗಿ ಊರಿಗೆ ವೈರಸ್ ತಗುಲಬಾರದು, ಊರನ್ನು ಕಾಪಾಡಬೇಕು ಎಂದು ತಿಳಿದು ತಾನೇ ಪ್ರಾಣ ತ್ಯಾಗ ಮಾಡಿದ್ದಾನೆ ಎನ್ನಲಾಗಿದೆ.

ಆದರೆ ಆ ವ್ಯಕ್ತಿಗೆ ಕೊರೊನಾ ವೈರಸ್ ಇರಲಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ಧಾರೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

SCROLL FOR NEXT