ದೇಶ

ಶಿಕ್ಷೆ ಮುಂದೂಡಿಕೆಗೆ ಹೊಸ ತಂತ್ರ ಹೆಣೆದ ಅತ್ಯಾಚಾರಿಗಳು! ನನಗೆ ವಕೀಲರು ಬೇಕೆಂದ ನಿರ್ಭಯಾ ಅಪರಾಧಿ 

 ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಅಪರಾಧಿಗಳಲ್ಲಿ ಒಬ್ಬನಾದ  ಪವನ್ ಗುಪ್ತಾ ತಮಗೆ ವಕೀಲರಿಲ್ಲ, ಇದ್ದ ಹಳೆಯ ವಕೀಲರನ್ನು ಕಿತ್ತು ಹಾಕಲಾಗಿದೆ, ಹೊಸ ವಕೀಲರು ಬರುವವರೆಗೆ ಸಮಯ ನೀಡಿರೆಂದು ಆತ ಕೋರ್ಟ್ ಗೆ ಮೊರೆ ಇಟ್ಟಿದ್ದಾರೆ. ಅಲ್ಲದೆ ಕಾನೂನು ನೆರವನ್ನು ಪಡೆಯಲು ಹೆಚ್ಚುವರಿ ಸಮಯಕ್ಕೆ ಬೇಡಿಕೆ ಇಟ್ಟಿದ್ದಾರೆ. 

ಈ ವೇಳೆ ನಿರ್ಭಯಾ ತಾಯಿ "ತನ್ನ ಹಕ್ಕುಗಳ ಕಥೆ ಹೇಳಿ, ನಾನು ಏಳು ವರ್ಷಗಳಿಂದ ಕಾಯುತ್ತಿದ್ದೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೋರ್ಟ್ ಈ ಕೂಡಲೇ ಡೆತ್ ವಾರಂಟ್ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.

ಅಪರಾಧಿಗಳ ಮರಣದಂಡನೆಗೆ ಹೊಸ ದಿನಾಂಕವನ್ನು ಜಾರಿಗೊಳಿಸಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸ್ವಾತಂತ್ರ್ಯವನ್ನು ನೀಡಿದ ನಂತರ ನಿರ್ಭಯಾ ಅವರ ಪೋಷಕರು ಮತ್ತು ದೆಹಲಿ ಸರ್ಕಾರವು ಮಂಗಳವಾರ ಹೊಸ ದಿನಾಂಕಕ್ಕಾಗಿ ನ್ಯಾಯಾಲಯಕ್ಕೆ ಹೋಗಿವೆ.

"ನಾನು ಈಗ ನಂಬಿಕೆ ಮತ್ತು ಭರವಸೆಯನ್ನು ಕಳೆದುಕೊಳ್ಳುತ್ತಿದ್ದೇನೆ. ನ್ಯಾಯಾಲಯವು ಅಪರಾಧಿಗಳ ವಿಳಂಬ ತಂತ್ರಗಳನ್ನು ಅರ್ಥಮಾಡಿಕೊಳ್ಳಬೇಕು. ಈಗ, ಪವನ್ ಗಾಗಿ ಹೊಸ ವಕೀಲರನ್ನು ನೇಮಿಸಿದರೆ ಮತ್ತೆ ಶಿಕ್ಷೆ ಇನ್ನಷ್ಟು ವಿಳಂಬವಾಗುವುದು ಖಚಿತ." ನಿರ್ಭಯಾ ತಾಯಿ ನುಡಿದರು.

ಈ ಮುನ್ನ ನಿರ್ಭಯಾ ಅಪರಾಧಿಗಳೀಗೆ ಜನವರಿ 22 ಕ್ಕೆ ತಿಹಾರ್ ಜೈಲಿನಲ್ಲಿ ಮರಣದಂಡನೆ ಶಿಕ್ಷೆಗಾಗಿ ದಿನ ನಿಗದಿಯಾಗಿತ್ತು. ಆ ದರೆ ಜ. 17 ರ ನ್ಯಾಯಾಲಯದ ಆದೇಶದ ಪ್ರಕಾರ ಫೆಬ್ರವರಿ 1 ರಂದು ಬೆಳಿಗ್ಗೆ 6 ಗಂಟೆಗೆ ಮುಂದೂಡಲಾಯಿತು. ವಿಚಾರಣಾ ನ್ಯಾಯಾಲಯವು ಜನವರಿ 31 ರಂದು ತಿಹಾರ್ ಜೈಲಿನಲ್ಲಿರುವ ಈ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು "ಮುಂದಿನ ಆದೇಶದವರೆಗೆ" ತಡೆ ವಿಧಿಸಿದ ಕಾರಣ ಮತ್ತೆ ಶಿಕ್ಷೆ ಜಾರಿ ಮುಂದಕ್ಕೆ ಹೋಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT