ದೇಶ

ಪ್ರಣಾಳಿಕೆ ಐದು ವರ್ಷಗಳವರೆಗೆ, ತಿಂಗಳುಗಳಿಗೆ ಅಲ್ಲ: ಸಿಂಧಿಯಾಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕಮಲ್ ನಾಥ್ 

Nagaraja AB

ನವದೆಹಲಿ: ಮಧ್ಯ ಪ್ರದೇಶದ ಕಾಂಗ್ರೆಸ್ ಪ್ರಣಾಳಿಕೆ ಐದು ವರ್ಷವುಳ್ಳದಾಗಿದ್ದು, ಇನ್ನೂ ಪೂರ್ಣವಾಗಿಲ್ಲ ಎಂದು ಮುಖ್ಯಮಂತ್ರಿ ಕಮಲ್ ನಾಥ್ ಹೇಳುವ ಮೂಲಕ  ರಾಜ್ಯಸರ್ಕಾರ  ಭರವಸೆ  ಈಡೇರಿಸುವಲ್ಲಿ ವಿಳಂಬ ಮಾಡುತ್ತಿದ್ದೆ ಎಂಬ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಈಡೇರದಿದ್ದಲ್ಲಿ ತಾನು ಅತಿಥಿ ಶಿಕ್ಷಕರ "ಕತ್ತಿ  ಮತ್ತು ಗುರಾಣಿ" ಆಗುತ್ತೇನೆ  ಎಂದು ಕಾರ್ಯಕ್ರಮವೊಂದರಲ್ಲಿ ಸಿಂಧಿಯಾ ಹೇಳಿದ ಬೆನ್ನಲ್ಲೇ ಕಮಲ್ ನಾಥ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ಐದು ವರ್ಷಗಳಿಗಾಗಿ ಪ್ರಣಾಳಿಕೆಯನ್ನು ರೂಪಿಸಲಾಗುತ್ತದೆ. ಅದನ್ನು ಕೇವಲ ಐದು ತಿಂಗಳುಗಳಿಗೆ ಮಾತ್ರ ರೂಪಿಸುವುದಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ಕಮಲ್ ನಾಥ್ ಪ್ರತಿಕ್ರಿಯಿಸಿದರು. 

ನಿಮ್ಮ ಬೇಡಿಕೆಗಳು ಸರ್ಕಾರದ ಪ್ರಣಾಳಿಕೆಯಲ್ಲಿದೆ. ಅದನ್ನು ಪೂರ್ಣಗೊಳಿಸುವಲ್ಲಿ ವಿಫಲವಾದಲ್ಲಿ ಶಿಕ್ಷಕರು ಸ್ವಲ್ಪ ತಾಳ್ಮೆ ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದಲ್ಲಿ  ನಿಮ್ಮ ಕತ್ತಿ ಗುರಾಣಿಯಾಗುವುದಾಗಿ ಸಿಂಧಿಯಾ ಗುರುವಾರ ಹೇಳಿಕೆ ನೀಡಿದ್ದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಕಮಲ್ ನಾಥ್ ಹಾಗೂ ಸಿಂಧಿಯಾ ನಡುವಣ ವಾಕ್ಸಮರ ಇದು ಮೊದಲೇನಲ್ಲ. ಈ ಹಿಂದೆ ಅನೇಕ ಬಾರಿ ಇದೇ ರೀತಿಯ ವಾಕ್ಸಮರ ನಡೆದಿದೆ. 

SCROLL FOR NEXT