ದೇಶ

ವಾರಾಣಸಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪುತ್ಹಳಿ ಅನಾವರಣಗೊಳಿಸಿದ ಪ್ರಧಾನಿ ಮೋದಿ 

Nagaraja AB

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಾಣಸಿಯಲ್ಲಿಂದು 63 ಅಡಿ ಎತ್ತರದ ಮಾಜಿ ಭಾರತೀಯ ಜನ ಸಂಘ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುತ್ಹಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.

ಪಂಚ ಲೋಹದಿಂದ  ಈ ಪುತ್ಹಳಿಯನ್ನು ನಿರ್ಮಿಸಲಾಗಿದ್ದು, ಇದು ದೇಶದಲ್ಲಿಯೇ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಎತ್ತರದ ಪ್ರತಿಮೆಯಾಗಿದೆ. ಸುಮಾರು 200 ಶಿಲ್ಪಿಗಳು ಒಂದು ವರ್ಷಗಳ ಕಾಲ ಶ್ರಮ ವಹಿಸಿ ಈ ಪ್ರತಿಮೆಯನ್ನು ಪೂರ್ಣಗೊಳಿಸಿದ್ದಾರೆ.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಕೇಂದ್ರವನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸ್ಮಾರಕ ದೀನ್ ದಯಾಳ್ ಉಪಾಧ್ಯಾಯ ಅವರ ಬದುಕು ಮತ್ತು ಜೀವನದ ಬಗ್ಗೆ ಬೆಳಕು ಚೆಲ್ಲಲಿದೆ. 30 ಒಡಿಶಾದ ಕುಶಲ ಕರ್ಮಿಗಳು ಈ ಸ್ಮಾರಕ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ಇಂದು ಬೆಳಗ್ಗೆ ವಾರಾಣಸಿಗೆ ಆಗಮಿಸಿದ ಪ್ರಧಾನಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ  430 ಹಾಸಿಗೆ ಸಾಮರ್ಥ್ಯದ ಸೂಪರ್  ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ, 74 ಹಾಸಿಗೆ ಮಾನಸಿಕ ಆರೋಗ್ಯ ಆಸ್ಪತ್ರೆ, ವಸ್ತು ಪ್ರದರ್ಶನ, ಮಹಾ ಕಾಲ್ ಎಕ್ಸ್ ಪ್ರೆಸ್ ಗೆ ಚಾಲನೆ ಸೇರಿದಂತೆ ಸುಮಾರು 30 ಯೋಜನೆಗಳನ್ನು ಉದ್ಘಾಟಿಸಿದರು, 

ಮಹಾಕಾಲ್ ಎಕ್ಸ್ ಪ್ರೆಸ್  ಮೂರು ಜ್ಯೋತಿರ್ಲಿಂಗ ಕೇಂದ್ರಗಳಾದ ವಾರಾಣಸಿ, ಉಜ್ಜೈನಿ ಮತ್ತು ಓಂಕಾರೇಶ್ವರವನ್ನು ಸಂಪರ್ಕಿಸಲಿದೆ. 

SCROLL FOR NEXT