ಚೋಟಾ ಮಫ್ಲರ್ ಮ್ಯಾನ್ ಗಳು 
ದೇಶ

ಕೇಜ್ರಿವಾಲ್ ಪದಗ್ರಹಣ ಸಮಾರಂಭದಲ್ಲಿ' ಚೋಟಾ ಮಫ್ಲರ್ ಮ್ಯಾನ್ ಗಳು!

ರಾಮಲೀಲಾ ಮೈದಾನದಲ್ಲಿ ನಡೆದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಪದಗ್ರಹಣ ಸಮಾರಂಭದಲ್ಲಿ ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಗಮನ ಸೆಳೆದರು.

ನವದೆಹಲಿ: ರಾಮಲೀಲಾ ಮೈದಾನದಲ್ಲಿ ನಡೆದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಪದಗ್ರಹಣ ಸಮಾರಂಭದಲ್ಲಿ ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಗಮನ ಸೆಳೆದರು.

 ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಅರವಿಂದ್ ಕೇಜ್ರಿವಾಲ್ ರೀತಿಯಲ್ಲಿ ಉಡುಪು ಧರಿಸಿದ್ದ ಅವ್ಯಾನ್‌ ತೋಮರ್‌  ಒಂದೇ ಒಂದು ದಿನಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಗೆ ಬಂದಿದ್ದ.ಫೆಬ್ರವರಿ 11 ರಂದು ಆಮ್ ಆದ್ಮಿ ಪಕ್ಷದ ಹೊರಗಡೆ ಕೇಜ್ರಿವಾಲ್ ರೀತಿಯ ಸ್ವೆಟರ್, ಕನ್ನಡಕ ಹಾಗೂ ಎಎಪಿ ಟೋಪಿ ಧರಿಸಿದ್ದ 1 ವರ್ಷದ ಅವ್ಯಾನ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದ.

ಆದರೆ, ಇಂದು ನಡೆದ ಸಮಾರಂಭದಲ್ಲಿ ಅವ್ಯಾನ್ ಜೊತೆಗೆ ಇನ್ನೂ ಅನೇಕ ಚೋಟಾ ಮಫ್ಲರ್ ಮ್ಯಾನ್ ಗಳು ಪಾಲ್ಗೊಂಡಿದ್ದರು.  ವೇದಿಕೆ ಮುಂಭಾಗದಲ್ಲಿ ಕೇಜ್ರಿವಾಲ್ ರೀತಿಯಲ್ಲಿ ಉಡುಪು ಧರಿಸಿದ್ದ ನಾಲ್ಕೈದು ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾದರು.

ಕೇಜ್ರಿವಾಲ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕೇಜ್ರಿವಾಲ್ ಜಿಂದಾಬಾದ್ ಎಂದು ಚೋಟಾ ಮಫ್ಲರ್ ಮ್ಯಾನ್ ಗಳಲ್ಲಿ ಒಬ್ಬ ಬಾಲಕನಾದ ಜಾಯಿದ್ ಹುಸೈನ್ ಅವರ ತಾಯಿ ರುಕ್ಸಾನಾ ಬೇಗಂ ಹೇಳಿದರು. ಪದೇ ಪದೇ ಕೇಜ್ರಿವಾಲ್ ಘೋಷಣೆ ಕೂಗುವಂತೆ ರುಕ್ಸಾನಾ ಬೇಗಂ , ತನ್ನ ಮಗನಿಗೆ ನಿರ್ದೇಶಿಸುತ್ತಿದ್ದ ದೃಶ್ಯ ಕಂಡುಬಂದಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT