ದೇಶ

ಪರಶಿವನಿಗಾಗಿ ಟಿಕೆಟ್ ರಿಸರ್ವ್ ಮಾಡಿ, ವಿವಾದದ ಕಿಡಿ ಹೊತ್ತಿಸಿದ ರೈಲ್ವೆ ಇಲಾಖೆ

Shilpa D

ನವದೆಹಲಿ: ರೈಲಿನಲ್ಲಿ ಸೀಟನ್ನು ಮೀಸಲು ಪಡೆಯುವುದು ಹರಸಾಹಸವೇ ಸರಿ, ಕೆಲವೊಮ್ಮೆ ವಾರಗಟ್ಟಲೆ ಸೀಟಿಗಾಗಿ ಕಾಯಬೇಕಾಗುತ್ತದೆ. 

ಆದರೆ ಇದೇ ಮೊದಲ ಬಾರಿಗೆ ರೈಲಿನಲ್ಲಿ ದೇವರಿಗೂ ಸೀಟನ್ನು ಮೀಸಲಿಡಲಾಗಿದೆ. ರೈಲ್ವೆ ಇಲಾಖೆಯು ಮಹಾ ಶಿವರಾತ್ರಿ ಪ್ರಯುಕ್ತ ಮಹಾ ಶಿವನಿಗೂ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಿದೆ.

ಎರಡು ರಾಜ್ಯಗಳ ಮೂರು ಜ್ಯೋತಿರ್ಲಿಂಗಗಳನ್ನು ತಲುಪುವ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ಗೆ ಭಾನುವಾರ ವಾರಾಣಸಿಯಿಂದ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ.  ಈ ರೈಲಿನ ಮುಖ್ಯ ಆಕರ್ಷಣೆಯಾದ ಆ ಶಿವನಿಗೆ ಶಾಶ್ವತವಾದ ಪ್ರಾಮುಖ್ಯವನ್ನು ಒದಗಿಸಲು ರೈಲ್ವೆ ಅಧಿಕಾರಿಗಳು, ಸೀಟ್ ನಂಬರ್ 64, ಬೋಗಿ B5 ಅನ್ನು ಆ ದೇವರಿಗಾಗಿ ರಿಸರ್ವ್ ಮಾಡಿದ್ದಾರೆ.

ರೈಲ್ವೆ ಇಲಾಖೆಯಿಂದ ಐಆರ್ ಸಿಟಿಸಿ ಮೂಲಕವಾಗಿ ಆರಂಭಿಸಲಾದ ಮೂರನೇ ಕಾರ್ಪೊರೇಟ್ ರೈಲು ಇದು. ಉತ್ತರಪ್ರದೇಶದ ವಾರಾಣಸಿಯಿಂದ ಮಧ್ಯಪ್ರದೇಶದ ಇಂದೋರ್ ಮಧ್ಯೆ ಈ ರೈಲು ಚಲಿಸುತ್ತದೆ. ಇದಕ್ಕೆ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ಎಂದು ಹೆಸರನ್ನು ಇಡಲಾಗಿದೆ.

ಇನ್ನೂಈ ರಿಸರ್ವ್ ಸೀಟಿನ ಫೋಟೋ ತೆಗೆದು ಟ್ವಿಟ್ಟರ್ ನಲ್ಲಿ ಅಸಾದುದ್ದೀನ್ ಓವೈಸಿ ಅಪ್ ಲೋಡ್ ಮಾಡಿದ್ದಾರೆ.  ರೈಲನ್ನು ಮಿನಿ ಶಿವ ದೇವಾಲಯವನ್ನಾಗಿಸುತ್ತಿದ್ದಾರೆ ಎಂದು ಲೇವಡಿಮಾಡದ್ದಾರೆ.

SCROLL FOR NEXT