ದೇಶ

ಸಿಎಎಗೆ ಯಾರೂ ಭಯಪಡಬಾರದು, ಎನ್‌ಪಿಆರ್‌ನಿಂದ ಯಾರಿಗೂ ತೊಂದರೆಯಿಲ್ಲ: ಉದ್ಧವ್ ಠಾಕ್ರೆ

Raghavendra Adiga

ಮುಂಬೈ: ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್) ದಾಖಲಾತಿಯನ್ನು ನಿರ್ಬಂಧಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಎನ್‌ಪಿಆರ್‌ನಲ್ಲಿ "ವೈಯಕ್ತಿಕವಾಗಿ ಕಲಂಗಳನ್ನು ಪರಿಶೀಲಿಸುತ್ತಾರೆ" ಠಾಕ್ರೆ ಭರವಸೆ ನೀಡಿದರು, ಮಹಾರಾಷ್ಟ್ರದಲ್ಲಿ ಇದಾವ ಸಮಸ್ಯೆಗೆ ಕಾರಣವಾಗುವುದಿಲ್ಲ ಎಂದು ಅವರು ತಿಳಿಸಿದರು.

"ಸಿಎಎ ಮತ್ತು ಎನ್‌ಆರ್‌ಸಿ ಬೇರೆ, ಎನ್‌ಪಿಆರ್ ಬೇರೆ ಬಗೆಯಲ್ಲಿದೆ.ಸಿಎಎ ಜಾರಿಗೆ ಬಂದರೆ ಯಾರೂ ಚಿಂತಿಸಬೇಕಾಗಿಲ್ಲ. ಎನ್‌ಆರ್‌ಸಿ ನಮ್ಮಲ್ಲಿ ಜಾರಿಯಾಗಲ್ಲ, ಮುಂದೆಯೂ ಜಾರಿಗೆ ಬರುವುದಿಲ್ಲ" ಠಾಕ್ರೆ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಎನ್‌ಪಿಆರ್ ದಾಖಲಾತಿಗಳು ನಡೆಯಲಿದ್ದು ಇದರ ಬಗ್ಗೆ ಯಾವುದೇ ವಿವಾದಗಳಿಲ್ಲ. ಎನ್‌ಆರ್‌ಸಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಠಾಕ್ರೆ ಹೇಳಿದರು.

"ಎನ್‌ಆರ್‌ಸಿ ಜಾರಿಗೆ ಬಂದರೆ ಅದು ಹಿಂದೂಗಳು ಅಥವಾ ಮುಸ್ಲಿಮರಷ್ಟೇ ಅಲ್ಲ, ಆದಿವಾಸಿಗಳ ಮೇಲೂ ಪರಿಣಾಮ ಬೀರುತ್ತದೆ. ಎನ್‌ಪಿಆರ್ ಒಂದು ಜನಗಣತಿಯಾಗಿದೆ, ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ಅದು ನಡೆಯುತ್ತದೆ. ಅದನ್ನು ನಡೆಸುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ನಾನು ಕಂಡುಕೊಡಿದ್ದೇನೆ"ಅವರು ಹೇಳಿದರು.

SCROLL FOR NEXT