ದೇಶ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಎನ್ ಕೌಂಟರ್: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ 

Sumana Upadhyaya

ಜಮ್ಮು: ಕಣಿವೆ ಪ್ರದೇಶ ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸಪ್ಪಳ ಕೇಳಿಬಂದಿದೆ. ಅದು ಕಳೆದ ವರ್ಷ ಫೆಬ್ರವರಿ 14ರಂದು 40 ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಜಿಲ್ಲೆಯಲ್ಲಿಯೇ.


ಪುಲ್ವಾಮಾ ಜಿಲ್ಲೆಯ ಟ್ರಾಲ್ ಎಂಬ ಪ್ರದೇಶದಲ್ಲಿ ಇಂದು ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಸೇನಾಪಡೆ, ಸಿಆರ್ ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಮೂವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ.


ಮೃತ ಉಗ್ರರನ್ನು ಜಂಗೀರ್ ರಫೀಖ್ ವಾನಿ, ರಾಜಾ ಉಮರ್ ಮಖ್ಬೂಲ್ ಭಟ್ ಮತ್ತು ಉಜೈರ್ ಅಮಿನ್ ಭಟ್ ಎಂದು ಗುರುತಿಸಲಾಗಿದೆ. ಈ ಮೂವರೂ ಉಗ್ರರು ಅನ್ಸರ್ ಘಾಜ್ವಾ ಉಲ್ ಹಿಂದ್ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದಾರೆ.

SCROLL FOR NEXT