ದೇಶ

15 ಕೋಟಿಯಷ್ಟಿರುವ ಮುಸ್ಲಿಂರು 100 ಕೋಟಿ ಹಿಂದೂಗಳ ಮೇಲೆ ಪ್ರಾಬಲ್ಯ ಮೆರೆಯಬಹುದು- ವಾರಿಸ್ ಪಠಾಣ್ 

Nagaraja AB

ನವದೆಹಲಿ: ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಹಿಂದೂ ಸಮುದಾಯವನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ದೇಶದಲ್ಲಿ ಮುಸ್ಲಿಂರು ಕೇವಲ 15 ಕೋಟಿ ಇರಬಹುದು ಆದರೆ, ಅವರು 100 ಕೋಟಿ ಜನರ ದೊಡ್ಡ ಸಮುದಾಯದ ಮೇಲೆ ಪ್ರಾಬಲ್ಯ ಮೆರೆಯಬಹುದು ಎಂದು ಹೇಳಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ  ನಡೆಸುತ್ತಿರುವ ಪ್ರತಿಭಟನೆಯನ್ನು ಮುಸ್ಲಿಂ ಮಹಿಳೆಯರನ್ನು  ಸಿಂಹಗಳಿಗೆ ಹೋಲಿಸಿರುವ ಮಾಜಿ ಶಾಸಕ ಪಠಾಣ್, ಇಡೀ ಸಮುದಾಯ ಒಟ್ಟಿಗೆ ಬಂದರೆ ದೊಡ್ಡ ಪರಿಣಾಮ ಉಂಟಾಗಲಿದೆ ಎಂದಿದ್ದಾನೆ.

 ನಮ್ಮ ಮಹಿಳೆಯರನ್ನು ಮುಂಚೂಣಿಯಲ್ಲಿ ಇಟ್ಟಿದ್ದೇವೆ. ಕೇವಲ ಹೆಣ್ಣು ಸಿಂಹಗಳು ಹೊರಗೆ ಬಂದಿರುವುದಕ್ಕೆ ನೀವು ಈಗಾಗಲೇ ಬೆವರುತ್ತಿದ್ದೀರಿ. ಒಂದು ವೇಳೆ ಎಲ್ಲರೂ ಒಟ್ಟಾಗಿ ಆಗಮಿಸಿದರೆ ಏನಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಾವು ಕೇವಲ 15 ಕೋಟಿ ಇರಬಹುದು ಆದರೆ, 100 ಕೋಟಿಯಷ್ಟಿರುವ ದೊಡ್ಡ ಸಮುದಾಯಕ್ಕಿಂತಲೂ ದೊಡ್ಡ ಪಡೆಯಾಗಬಹುದು ಎಂದು ಹೇಳಿಕೆ ನೀಡಿದ್ದಾರೆ.

ಫೆಬ್ರವರಿ 16 ರಂದು ಕರ್ನಾಟಕದ ಗುಲ್ಪರ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಮ್ಮುಖದಲ್ಲಿ ಪಠಾಣ್ ಭಾಷಣ ಮಾಡಿದ್ದ.

SCROLL FOR NEXT