ದೇಶ

ಮಹಾರಾಷ್ಟ್ರದ ಸೋಲಾಪುರದಲ್ಲಿ ಬಸ್-ಜೀಪ್ ಡಿಕ್ಕಿ: ನಾಲ್ವರು ಸಾವು, 10 ಮಂದಿಗೆ ಗಾಯ 

Sumana Upadhyaya

ಸೋಲಾಪುರ(ಮಹಾರಾಷ್ಟ್ರ): ರಾಜ್ಯ ಸಾರಿಗೆ ಬಸ್ಸು ಮತ್ತು ಜೀಪ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಮೃತಪಟ್ಟು 10 ಮಂದಿ ಗಾಯಗೊಂಡಿರುವ ಘಟನೆ ಮಾಹಾರಾಷ್ಟ್ರದ ಸೋಲಾಪುರದ ವೈರಗ್ ಪ್ರದೇಶದಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ.

ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇದರಲ್ಲಿ ಜೀಪ್ ಸಂಪೂರ್ಣ ಜಖಂಗೊಂಡಿದೆ. ಬಸ್ಸು ಬರ್ಶಿ ಕಡೆ ಪ್ರಯಾಣಿಸುತ್ತಿತ್ತು. 

SCROLL FOR NEXT