ದೇಶ

ಫೆ.24ಕ್ಕೆ ಭಾರತಕ್ಕೆ ಟ್ರಂಪ್: ಹೆಚ್1ಬಿ ವೀಸಾ ಸೇರಿ ಹಲವು ವಿಚಾರಗಳ ಕುರಿತು ಮಹತ್ವದ ಮಾತುಕತೆ

Manjula VN

ನವದೆಹಲಿ: ಫೆ.24 ಮತ್ತು ಫೆ.25ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಆಗಮಿಸುತ್ತಿದ್ದು, ಈ ವೇಳೆ ಹೆಚ್1ಬಿ ವೀಸಾ, ನಾಗರಿಕ ಪರಮಾಣು ಸಹಕಾರ, ಬಾಹ್ಯಾಕಾಶ ಸಹಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಭಾರತ ಹಾಗೂ ಅಮೆರಿಕಾ ರಾಷ್ಟ್ರಗಳ ನಡುವೆ ಮಹತ್ವದ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ. 

ಟ್ರಂಪ್ ಭೇಟಿ ನೀಡುತ್ತಿರುವ ಕುರಿತು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾಕ ರವೀಶ್ ಕುಮಾರ್ ಅವರು ಮಾಹಿತಿ ನೀಡಿದ್ದು, ಉಭಯ ನಾಯಕರ ಮಾತಕತೆ ವೇಳೆ ಹೆಚ್1ಬಿ ವೀಸಾ, ನಾಗರೀಕ ಪರಮಾಣು ಸಹಕಾರ, ಬಾಹ್ಯಾಕಾಶ ಸಹಕಾರ ಹಾಗೂ ಭಯೋತ್ಪಾದನೆ ಮಟ್ಟ ಹಾಕುವ ಕುರಿತು ಮಹತ್ವದ ಮಾತುಕತೆಗಳು ನಡೆಯಲಿದೆ ಎಂದು ಹೇಳಿದ್ದಾರೆ. 

ಅಮೆರಿಕಾ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ದೇಶಗಳ ರಕ್ಷಣೆ ಹಾಗೂ ಭಯೋತ್ಪಾದನೆಗೆ ವಿರುದ್ಧ ಹೋರಾಟ ಕುರಿತು ಮಹತ್ವದ ಮಾತುಕತೆ ನಡೆಯಲಿದೆ. ಭಯೋತ್ಪಾದನೆ ವಿರುದ್ಧ ಭಾರತ ಹೋರಾಟ ನಡೆಸುತ್ತಿದ್ದು, ಇದಕ್ಕೆ ಅಮೆರಿಕಾ ಕೂಡ ಬೆಂಬಲ ನೀಡಿದೆ. ಪ್ರಮುಖವಾಗಿ ಪುಲ್ವಾಮ ದಾಳಿ ನಡೆದ ಬಳಿಕ ಅಮೆರಿಕಾ ಬೆಂಬಲ ಮತ್ತಷ್ಟು ಬಲಗೊಂಡಿದೆ. ಭಯೋತ್ಪಾದನೆ ಕುರಿತಂತೆ ಅಷ್ಟೇ ಅಲ್ಲದೆ, ನಾಗರಿಕ ಪರಮಾಣು ಸಹಕಾರ, ಬಾಹ್ಯಾಕಾಶ ಸಹಕಾರ ಸೇರಿ ಹಲವು ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ನಮಸ್ತೆ ಟ್ರಂಪ್ ಕಾರ್ಯಕ್ರಮ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಕೂಡ ಇಂತಹುದ್ದೇ ಕಾರ್ಯಕ್ರಮವನ್ನು ನಡೆಸಲಾಗಿದ್ದು. ಕಾರ್ಯಕ್ರಮವನ್ನು ಡೊನಾಲ್ಡ್ ಟ್ರಂಪ್ ನಾಗರೀಕ ಅಭಿನಂದನ ಸಮಿತಿ ಆಯೋಜಿಸುತ್ತಿದೆ ಎಂದಿದ್ದಾರೆ. 


ಆದರೆ, ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು, ಖಾಸಗಿ ಸಮಿತಿಯೊಂದರ ಕಾರ್ಯಕ್ರಕ್ಕೆ ಗುಜರಾತ್ ಸರ್ಕಾರವೇಕೆ ಇದಕ್ಕೆ ರೂ.120 ಕೋಟಿ ವ್ಯಯಿಸುತ್ತಿದೆ ಎಂದು ಪ್ರಶ್ನಿಸುತ್ತಿದೆ. 

ಡೊನಾಲ್ಡ್ ಟ್ರಂಪ್ ಅಭಿನಂದನ್ ಸಮಿತಿಯ ಅಧ್ಯಕ್ಷರು ಯಾರು? ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಯಾವಾಗ ಕಳುಹಿಸಲಾಗಿತ್ತು? ಯಾವಾಗ ಟ್ರಂಪ್ ಅವರು ಆ ಆಹ್ವಾನ ಪತ್ರಿಕೆಗೆ ಒಪ್ಪಿಗೆ ನೀಡಿದ್ದರು? ಖಾಸಗಿ ಸಮಿತಿ ಆಯೋಜನೆ ಮಾಡುತ್ತಿರುವ 3 ಗಂಟೆಗಳ ಕಾರ್ಯಕ್ರಮಕ್ಕೇಕೆ ಗುಜರಾತ್ ರಾಜ್ಯ ಸರ್ಕಾರ ರೂ.120 ಕೋಟಿ ಖರ್ಚು ಮಾಡುತ್ತಿದೆ? ಎಂದು ರಂದೀಪ್ ಸುರ್ಜೇವಾಲಾ ಅವರು ಪ್ರಶ್ನಿಸಿದ್ದಾರೆ. 

SCROLL FOR NEXT