ದೇಶ

ಪಶ್ಚಿಮ ಬಂಗಾಳ: ಸ್ವಾಮಿ ವಿವೇಕಾನಂದ ವಿಗ್ರಹ ಧ್ವಂಸ, ಪೊಲೀಸ್ ತನಿಖೆ ಆರಂಭ

Srinivasamurthy VN

ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಸ್ವಾಮಿ ವಿವೇಕಾನಂದ ಪ್ರತಿಮೆ ಧ್ವಂಸ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ  ಕೈಗೊಂಡಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ ಬಾರಾಂಚ ಪ್ರದೇಶದಲ್ಲಿರುವ ಮಾ ಶಾರದಾ ನಾನಿ ದೇವಿ ಶಿಶು ಶಿಕ್ಷಾ ಕೇಂದ್ರದ ಸಮೀಪದಲ್ಲಿ ಈ ಪ್ರತಿಮೆ ಇದ್ದು, ಪ್ರತಿಮೆಯ ಕೈ ಮುರಿದುಬಿದ್ದಿದ್ದು, ಅದರ ಮುಖವನ್ನೂ ವಿರೂಪಗೊಳಿಸಿರುವ ವಿಡಿಯೋ, ಫೊಟೋಗಳು ವೈರಲ್ ಆಗಿವೆ.

ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಈ ಕೇಂದ್ರದವರೇ ಸ್ಥಾಪಿಸಿದ್ದರು. ಪ್ರತಿಮೆಗೆ ಹಾನಿ ಎಸಗಿದವರು ಯಾರು ಎಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಬಾರಾಂಚ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಮೇ 14ರಂದು ಬಿಜೆಪಿಯ ಅಂದಿನ ಅಧ್ಯಕ್ಷ ಅಮಿತ್ ಷಾ ಅವರ ರೋಡ್ ಷೋ ಆಯೋಜನೆಗೊಂಡ ಸಂದರ್ಭದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರರ ಪ್ರತಿಮೆಯನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದರು.

SCROLL FOR NEXT