ದೇಶ

ಡೊನಾಲ್ಡ್ ಟ್ರಂಪ್ ಬಂದಾಗ ಹೆಚ್-1ಬಿ ವೀಸಾ, ಜಿಎಸ್ ಪಿ ಬಗ್ಗೆ ಕೇಳುತ್ತೀರಾ: ಪಿಎಂ ಮೋದಿಗೆ ಕಾಂಗ್ರೆಸ್ ಪ್ರಶ್ನೆ 

Sumana Upadhyaya

ನವದೆಹಲಿ:ಹೆಚ್-1ಬಿ ವೀಸಾ ನೀಡಿಕೆ ಪ್ರಕ್ರಿಯೆಗಳಲ್ಲಿ ಸರಳೀಕರಣಗೊಳಿಸುವುದು, ಜಿಎಸ್ ಪಿ ಪುನಃಸ್ಥಾಪನೆ,ತಾಲಿಬಾನ್ ವಿಷಯದಲ್ಲಿ ಭದ್ರತೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸುತ್ತಾರೆಯೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.


ಕಾಂಗ್ರೆಸ್ ನ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ, ಅಧ್ಯಕ್ಷ ಟ್ರಂಪ್ ಅಮೆರಿಕಾ ಫಸ್ಟ್ ಬಗ್ಗೆ ಮಾತನಾಡುತ್ತಿರುವಾಗ ಮೋದಿಯವರು ಇಂಡಿಯಾ ಫಸ್ಟ್ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಕೇಳಿದ್ದಾರೆ.


ನಿರ್ಬಂಧ ಹಿನ್ನಲೆಯಲ್ಲಿ ಇರಾನ್ ನಿಂದ ತೈಲ ಆಮದನ್ನು ನಿಲ್ಲಿಸಿದ ನಂತರ ಅಮೆರಿಕಾದಿಂದ ಅಗ್ಗದ ತೈಲವನ್ನು ಆಮದು ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಾರೆಯೇ ಹಾಗೂ ಅಮೆರಿಕದಿಂದ ರಕ್ಷಣಾ ಸಾಮಗ್ರಿಗಳ ಖರೀದಿಯಿಂದ ಭಾರತದ ಸ್ಟೀಲ್ ಸಾಮಗ್ರಿಗಳ ರಫ್ತಿಗೆ ಪ್ರೋತ್ಸಾಹ ಸಿಗುತ್ತದೆಯೇ ಎಂದಿದ್ದಾರೆ.


ಡೊನಾಲ್ಡ್ ಟ್ರಂಪ್ ಸರ್ಕಾರದ ವಲಸೆ ನೀತಿಗಳ ನಿರ್ಬಂಧದಿಂದ ಹೆಚ್-1ಬಿ ವೀಸಾ ವಿಷಯದಲ್ಲಿ ಭಾರತೀಯರಿಗೆ ತೊಂದರೆಯಾಗಿದೆ. ಕಳೆದ ವರ್ಷ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದರು.ಆಗಲಾದರೂ ವೀಸಾ ಬಗ್ಗೆ ಪ್ರಸ್ತಾಪಿಸಿದ್ದರೇ ಎಂದು ಸುರ್ಜೆವಾಲಾ ಕೇಳಿದ್ದಾರೆ.

SCROLL FOR NEXT