ದೇಶ

ಭಾರತದತ್ತ ಟ್ರಂಪ್, ಮೆಲಾನಿಯಾ ಪ್ರಯಾಣ; ಸಾಂಪ್ರದಾಯಿಕ ಸ್ವಾಗತ ಕೋರಲು ಅಹಮದಾಬಾದ್ ಸಜ್ಜು

Srinivas Rao BV

ಇತ್ತೀಚಿನ ವರದಿಗಳ ಪ್ರಕಾರ, ಭಾರತ ಪ್ರವಾಸಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಟ್ರಂಪ್ ಅಮೆರಿಕದ ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್ ನಿಂದ ಹೊರಟಿದ್ದಾರೆ. 

ಇತ್ತ ಟ್ರಂಪ್ ದಂಪತಿಗೆ ಸಾಂಪ್ರದಾಯಿಕ ಸ್ವಾಗತ ಕೋರಲು ಭಾರತ ಸಜ್ಜುಗೊಂಡಿದೆ. ತಿಲಕ, ಹಾರ, ಶಾಲುಗಳೊಂದಿಗೆ ಟ್ರಂಪ್, ಮೆಲಾನಿಯಾ ಟ್ರಂಪ್ ಗೆ ಸ್ವಾಗತ ಕೋರಲಾಗುತ್ತದೆ. 

ಐಟಿಸಿ ಮೌರ್ಯ ಗೆ ಟ್ರಂಪ್ ದಂಪತಿ ಆಗಮಿಸಲಿದ್ದು, ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂಕೇತವಾಗಿ ಸಂಪೂರ್ಣ ಹೊಟೆಲ್ ನಮಸ್ತೆ ವಿನ್ಯಾಸದಲ್ಲೇ ಸಿಂಗರಿಸಲಾಗಿದೆ. 

ಟ್ರಂಪ್ ದಂಪತಿ ಆಗಮಿಸುತ್ತಿದ್ದಂತೆಯೇ ಸಾಂಪ್ರದಾಯಿಕ ಉಡುಪು ಧರಿಸಿರುವ ಮಹಿಳೆಯರು ಅವರನ್ನು ಸ್ವಾಗತಿಸಲಿದ್ದಾರೆ. ಅಮೆರಿಕದ ಈ ಹಿಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ 2010 ರಲ್ಲಿ ಹಾಗೂ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸುವುದಕ್ಕಾಗಿ 2015ರಲ್ಲಿ ಭಾರತಕ್ಕೆ ಆಗಮಿಸಿದ್ದರು. ಆಗಲೂ ಇಂತಹದ್ದೇ ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. 

ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್, ಅಳಿಯ ಜೇರ್ಡ್ ಕುಶ್ನರ್ ಸಹ ಟ್ರಂಪ್ ತಂಡದ ಭಾಗವಾಗಿರಲಿದ್ದಾರೆ. 

ಅಹ್ಮದಾಬಾದ್ ನಿಂದ ಆಗ್ರಾಗೆ ತೆರಳಲಿರುವ ಟ್ರಂಪ್ ದಂಪತಿ ಸೂರ್ಯಾಸ್ತದ ವೇಳೆ ತಾಜ್ ಮಹಲ್ ಗೆ ಭೇಟಿ ನೀಡಲಿದ್ದಾರೆ. ನಂತರ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. ಬಳಿಕ ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. 

SCROLL FOR NEXT