ಸಬರಮತಿ ಆಶ್ರಮದಲ್ಲಿ ಟ್ರಂಪ್ ದಂಪತಿ 
ದೇಶ

ಸಬರಮತಿ ಆಶ್ರಮದಲ್ಲಿ ಗಾಂಧಿಗೆ ಗೌರವ ನಮನ, ಚರಕ ವೀಕ್ಷಿಸಿದ ಟ್ರಂಪ್ ದಂಪತಿ!

ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಸೋಮವಾರ ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು.

ಅಹಮದಾಬಾದ್: ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಸೋಮವಾರ ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು.

ಸಬರಮತಿ ಆಶ್ರಮಕ್ಕೆ ಆಗಮಿಸಿದ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿ, ಆಶ್ರಮವನ್ನು ಪರಿಚಯಿಸಿದರು. 
  
ಟ್ರಂಪ್ ಮತ್ತು ಮೆಲಾನಿಯಾ ಆಶ್ರಮದಲ್ಲಿ ನೆಲದ  ಮೇಲೆ ಕೂತು ಚರಕವನ್ನು ತಿರುಗಿಸಿದರು.

ಟ್ರಂಪ್ ದಂಪತಿ ಆಶ್ರಮದಲ್ಲಿ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವದ ಬಗ್ಗೆ ಬರೆದರು. ಸ್ನೇಹಿತ ನರೇಂದ್ರ ಮೋದಿಗೆ ವಂದನೆಗಳು, ಅದ್ಬುತ ಭೇಟಿಯಾಗಿದೆ ಎಂದು ಸಹಿ ಹಾಕಿದ್ದಾರೆ.

ಕೆಟ್ಟದ್ದನ್ನು ಕೇಳದಿರುವ, ಕೆಟ್ಟದ್ದನ್ನು ನೋಡದಿರುವ ಮತ್ತು ಕೆಟ್ಟದ್ದನ್ನು ಮಾತನಾಡದಿರುವ ಮೂರು ಮಂಗಗಳ ಪ್ರತಿರೂಪಗಳನ್ನು ಮೋದಿ ಅವರು ಟ್ರಂಪ್ ಗೆ ತೋರಿಸಿದರು. ಇವುಗಳ ಮಹತ್ವವನ್ನು ಅವರಿಗೆ ವಿವರಿಸಿದರು.
  
ಟ್ರಂಪ್ ಅವರು ತಮ್ಮ ಭಾರತದ ಮೊದಲ ಅಧಿಕೃತ ಪ್ರವಾಸವನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಮತ್ತು ವರ್ಣರಂಜಿತ ಸ್ವಾಗತ ಪಡೆಯುವುದರೊಂದಿಗೆ ಆರಂಭಿಸಿದರು.
  
ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿ ಸಹ ಟ್ರಂಪ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT