ಪ್ರಧಾನಿ ನರೇಂದ್ರ ಮೋದಿ 
ದೇಶ

21 ನೇ ಶತಮಾನದಲ್ಲಿ ಭಾರತ-ಅಮೆರಿಕ ಸಂಬಂಧಗಳದ್ದು ಮಹತ್ವದ ಪಾತ್ರ-ಪ್ರಧಾನಿ ಮೋದಿ

ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವಾಗತಿಸಿದ್ದು, 21 ನೇ ಶತಮಾನಕ್ಕೆ ದಿಕ್ಕು ರೂಪಿಸುವಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.    

ಅಹಮದಾಬಾದ್ : ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವಾಗತಿಸಿದ್ದು, 21 ನೇ ಶತಮಾನಕ್ಕೆ ದಿಕ್ಕು ರೂಪಿಸುವಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.  
  
ಪ್ರಪಂಚದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ಮೊಟೆರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಎರಡೂ ದೇಶಗಳು ಭಾರತ-ಪೆಸಿಫಿಕ್ ಪ್ರದೇಶದಲ್ಲಿ ಮಾತ್ರವಲ್ಲದೆ, ಇಡೀ ಪ್ರಪಂಚದ ಶಾಂತಿ,ಪ್ರಗತಿ ಮತ್ತು ಸುರಕ್ಷತೆಗೂ ಪರಿಣಾಮಕಾರಿ ಕೊಡುಗೆ ನೀಡಬಲ್ಲವು ಎಂದು ಹೇಳಿದರು. 

 ದಶಕದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿಯನ್ನು ‘ಬಹು ದೊಡ್ಡ ಅವಕಾಶ’ ಎಂದು ವಿವರಿಸಿದ ಮೋದಿ ಅವರು, 21 ನೇ ಶತಮಾನದಲ್ಲಿ ಹೊಸ ಸ್ಪರ್ಧೆ, ಹೊಸ ಸವಾಲುಗಳು ಮತ್ತು ಹೊಸ ಅವಕಾಶಗಳು ಬದಲಾವಣೆಗೆ ಅಡಿಪಾಯ ಹಾಕುತ್ತಿವೆ ಎಂದು ಹೇಳಿದರು.‘ನಂಬಿಕೆ ದೃಢವಾಗಿರುವಲ್ಲಿ ಸ್ನೇಹವಿರುತ್ತದೆ’ ಎಂದು ಪ್ರಧಾನ ಮಂತ್ರಿ ಹೇಳಿದರು. 

 ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ(ಅಮೆರಿಕ) ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ(ಭಾರತ) ನಡುವಿನ ಸಂಬಂಧದಲ್ಲಿನ ಸಮಾನತೆಗಳನ್ನು ಪ್ರತಿಪಾದಿಸಿದ ಮೋದಿ,’ ಭಾರತದ ಅತಿದೊಡ್ಡ ವ್ಯಾಪಾರ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅಮೆರಿಕ ಪಾಲುದಾರ ರಾಷ್ಟ್ರವಾಗಿದೆ. ಎರಡೂ ದೇಶಗಳ ನಡುವಿನ ಸಂಬಂಧ ಪ್ರತಿಯೊಂದು ವಿಷಯದಲ್ಲೂ ಬೆಳೆಯುತ್ತಿದೆ.’ ಎಂದು ಹೇಳಿದರು.
  
‘ಅಮೆರಿಕ ಇಂದು, ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಭಾರತೀಯ ಸೇನಾ ಪಡೆಗಳು ಅಮೆರಿಕದೊಂದಿಗೆ ಹೆಚ್ಚು ಸಮರಾಭ್ಯಾಸಗಳನ್ನು ನಡೆಸಿವೆ. ಭಾರತಕ್ಕೆ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ ಸಹಭಾಗಿತ್ವ ಹೊಂದಿರುವ ದೇಶವೆಂದರೆ ಅದು ಅಮೇರಿಕ ದೇಶವಾಗಿದೆ. 
  
‘ಏಕಕಾಲದಲ್ಲಿ ಹೆಚ್ಚು ಉಪಗ್ರಹಗಳನ್ನು ಕಳುಹಿಸುವುದರಲ್ಲಿ ಮಾತ್ರ ಭಾರತ, ವಿಶ್ವ ದಾಖಲೆಯನ್ನು ಸೃಷ್ಟಿಸುತ್ತಿಲ್ಲ. ಆದರೆ, ಹಣಕಾಸು ಒಳಗೊಳ್ಳುವಿಕೆಯಲ್ಲಿ ವಿಶ್ವ ದಾಖಲೆ ಸ್ಥಾಪಿಸಿದೆ. ಇಂದು ಭಾರತ  ಕೇವಲ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಮಾತ್ರ ಹೊಂದಿಲ್ಲ. ಭಾರತವು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆಯನ್ನು ಸಹ ನಡೆಸುತ್ತಿದೆ.  ವಿಶ್ವದ ಅತಿದೊಡ್ಡ ಸೌರ ಪಾರ್ಕ್ ನಿರ್ಮಾಣ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮವೂ ಭಾರತದಲ್ಲಿ ನಡೆಯುತ್ತಿದೆ.’ ಎಂದು ಅವರು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ನಿಯೋಗಕ್ಕೆ ತಿಳಿಸಿದರು.
  
ಭಾರತದ ಯುವ ಜನಸಂಖ್ಯೆಯ ಬಗ್ಗೆ ಮಾತನಾಡಿದ ಮೋದಿಯವರು, ‘ಇಂದು 130 ಕೋಟಿ ಭಾರತೀಯರು ಒಟ್ಟಾಗಿ ನವಭಾರತವನ್ನು ನಿರ್ಮಿಸುತ್ತಿದ್ದಾರೆ. ನಮ್ಮ ಯುವ ಸಾಮರ್ಥ್ಯವು ಆಕಾಂಕ್ಷೆಗಳಿಂದ ಕೂಡಿದೆ. ಮಹತ್ ಗುರಿಗಳನ್ನು ಹೊಂದುವುದರ ಮೂಲಕ ಅವುಗಳನ್ನು ಸಾಧಿಸುವುದು ನವ ಭಾರತದ ವಿಶಿಷ್ಟ ಲಕ್ಷಣವಾಗಿದೆ.’ ಎಂದು ಹೇಳಿದರು. 
  
ಅಮೆರಿಕದಲ್ಲಿನ ಭಾರತೀಯ ಸಮುದಾಯ ಜತೆಗಿನ ಸಂಬಂಧಗಳನ್ನು ಹಂಚಿಕೊಂಡ ಮೋದಿಯವರು, ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದಾಗ ಅಮೆರಿಕದಲ್ಲಿ  ವಾಸಿಸುವ ಭಾರತೀಯರೆಲ್ಲರೂ ಸಹ ಹೆಮ್ಮೆಪಡುತ್ತಾರೆ ಎಂದು  ಹೇಳಿದರು.
  
‘ಭಾರತ-ಅಮೆರಿಕ ಸ್ನೇಹ-ಬಾಂಧವ್ಯ ಚಿರಾಯುವಾಗಲಿ’ ಎಂದು ಪ್ರಧಾನಿ ಮೋದಿ ತಮ್ಮ ಭಾಷಣ ಮುಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT