ದೇಶ

ಉತ್ತರ ಪ್ರದೇಶ: ನಿಗೂಢ ರೀತಿಯಲ್ಲಿ ಎಎಪಿ ನಾಯಕ ಮುರಾರಿ ಲಾಲ್ ಜೈನ್ ಸಾವು

Shilpa D

ಲಲಿತ್ ಪುರ: ಉತ್ತರ ಪ್ರದೇಶ ಎಎಪಿ ನಾಯಕ ಮುರಾರಿ ಲಾಲ್ ಜೈನ್  ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 

ಉತ್ತರ ಪ್ರದೇಶದ ಲಲಿತ್ ಪುರದಿಂದ 15 ಕಿಮೀ ದೂರದಲ್ಲಿನ ಬ್ರಿಡ್ಜ್  ಕೆಳಗೆ ಶವ ಪತ್ತೆಯಾಗಿದೆ. 

ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರೂ ಹೇಗೆ ಅಪಗಾತ ಸಂಭವಿಸಿತು ಎಂಬುದನ್ನು ಅವರು ತಿಳಿಸಿಲ್ಲ, ಲಕ್ನೋದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದರು.

ಜೈನ್ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು ಎಂದು ಎಎಪಿ ವಕ್ತಾರ ವೈಭವ್ ಮಹೇಶ್ವರಿ ಹೇಳಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

SCROLL FOR NEXT