ದೇಶ

ದೆಹಲಿ ಪೋಲೀಸರಿಗೆ ಎಚ್ಚರಿಕೆ ನೀಡಿದ್ದ ಕಪಿಲ್ ಮಿಶ್ರಾ ವಿರುದ್ಧ ಕಠಿಣ ಕ್ರಮಕ್ಕೆ ಗಂಭೀರ್ ಆಗ್ರಹ

Raghavendra Adiga

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ನಡೆದ ಹಿಂಸಾಚಾರಕ್ಕೆ ಏಳು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ, ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ಮಂಗಳವಾರ ತಮ್ಮ ಪಕ್ಷದ ಮುಖಂಡ ಕಪಿಲ್ ಮಿಶ್ರಾ ವಿರುದ್ಧ ಕಿಡಿಕಾರಿದ್ದಾರೆ.

“ವ್ಯಕ್ತಿ ಯಾರೆಂಬುದು ಮುಖ್ಯವಲ್ಲ, ಅವರು ಕಪಿಲ್ ಮಿಶ್ರಾ ಆಗಿರಲಿಅಥವಾ ಬೇರೆ ಯಾರೇ ಆಗಿರಲಿ, ಯಾವುದೇ ಪಕ್ಷಕ್ಕೆ ಸೇರಿದವನಿರಲಿಅವರು ಯಾವುದೇ ಪ್ರಚೋದನಕಾರಿ ಭಾಷಣ ನೀಡಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. " ಎಎನ್‌ಐ ಜೊತೆ ಮಾತನಾಡಿದ ಗಂಬೀರ್ ಹೇಳಿದ್ದಾರೆ.

ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಪ್ರತಿಭಟನಾಕಾರು ರಸ್ತೆ ತೆರವುಗೊಳಿಸಲು ಆಗ್ರಹಿಸಿ ಮಿಶ್ರಾ ಭಾನುವಾರ ದೆಹಲಿ ಪೊಲೀಸರಿಗೆ ಎಚ್ಚರಿಕೆ ರವಾನಿಸಿದ್ದರು.ಮಿಶ್ರಾ ಟ್ವೀಟ್ ಮಾಡಿ"ಜಾಫ್ರಾಬಾದ್ ಮತ್ತುಚಾಂದ್  ಬಾಗ್ ರಸ್ತೆಗಳನ್ನು ತೆರವುಗೊಳಿಸಲು ದೆಹಲಿ ಪೊಲೀಸರಿಗೆ ಮೂರು ದಿನಗಳ ಗಡುವು ನೀಡುತ್ತೇನೆ.ಇದರ ನಂತರ ನಮ್ಮೊಂದಿಗೆಯಾವ ಚರ್ಚೆಗೆ ಆಸ್ಪದವಿರುವುದಿಲ್ಲ ಏಕೆಂದರೆ ನಾನು ಅದರ ಬಗೆಗೆ ಗಮನಿಸುವುದಿಲ್ಲ" ಎಂದಿದ್ದರು.

ವರು ತಮ್ಮ ಟ್ವೀಟ್‌ನೊಂದಿಗೆ ವೀಡಿಯೊವೊಂದನ್ನು ಲಗತ್ತಿಸಿದ್ದು ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಇರುವವರೆಗೂ ನಾವು ಶಾಂತಿಯನ್ನು ಕಾಪಾಡಿಕೊಳ್ಳುತ್ತೇವೆ. ಅದರ ನಂತರ, ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರನ್ನು ಸಹ ಲೆಕ್ಕಿಸದೆ ನುಗ್ಗಿ ಹೊಡೆಯುತ್ತೇವೆ" ಎಂದಿದ್ದರು. ಮಿಶ್ರಾ ಹೆಳಿಕೆಗಳು ಬಂದ ನಂತರ ಹಿಂಸಾಚಾರ ಹೆಚ್ಚಿದ ಹಿನ್ನೆಲೆ ಸೋಮವಾರ ಮಿಶ್ರಾ  ದೆಹಲಿ ಜನರಿಗೆ ಶಾಂತಿ ಕಾಪಾಡಿಕೊಳ್ಳಿ ಮತ್ತು ಹಿಂಸಾಚಾರವನ್ನು ನಿಲ್ಲಿಸಿ ಎಂದು ಮನವಿ ಮಾಡಿದರು. "ಹಿಂಸಾಚಾರವನ್ನು ನಿಲ್ಲಿಸಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲನಾನು ಸಿಎಎ ಅಥವಾ ಅದರ ವಿರುದ್ಧ ಇರುವವರನ್ನು ಬೆಂಬಲಿಸುತ್ತಿದ್ದೇನೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ದೆಹಲಿಯ ಸಹೋದರತ್ವ ಹಾಗೇ ಇರಬೇಕು "ಎಂದು ಮಿಶ್ರಾ ಎಎನ್‌ಐಗೆ ತಿಳಿಸಿದ್ದರು.

ಈಶಾನ್ಯ ದೆಹಲಿಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗನಡೆಯುತ್ತಿದ್ದು ಏಳು ಸಾವುಗಳಿಗೆ ಕಾರಣವಾಗಿವೆ ಮತ್ತು ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವಿನ ಈ ಘರ್ಷಣೆಯಲ್ಲಿ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾ

SCROLL FOR NEXT