ದೇಶ

ಕೋರೋನಾ ಭೀತಿ: ಜಪಾನ್ ಹಡಗಿನಲ್ಲಿದ್ದ ಕಾರವಾರದ ಯುವಕ ಸೇರಿ 119 ಭಾರತೀಯರು ತವರಿಗೆ ಆಗಮನ

Manjula VN

ನವದೆಹಲಿ: ಕೋರೋವಾ ವೈರಸ್ ಸೋಂಕಿನ ಆತಂಕದಿಂದಾಗಿ ಜಪಾನಿನ ಯುಕೋಮಾದಲ್ಲಿ ತಡೆಹಿಡಿಯಲ್ಪಟ್ಟಿರುವ ಹಡಗಿನಲ್ಲಿದ್ದ ಕಾರವಾರದ ಯುವಕ ಅಭಿಷೇಕ್ ಸೇರಿ 119 ಭಾರತೀಯರನ್ನು ಜಪಾನ್ ಸರ್ಕಾರ ಬಿಡುಗಡೆ ಮಾಡಿದ್ದು, ಗುರುವಾರ ತವರಿಗೆ ಬಂದಿಳಿದಿದ್ದಾರೆ. 

ಕೊರೋನಾ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಹಾಗೂ ಪೆರು ರಾಷ್ಟ್ರಗಳ ಐವರು ವಿದೇಶಿಯರು ಹಾಗೂ 119 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾಗಿರುವ ಎಲ್ಲಾ ಭಾರತೀಯರು ಇಂದು ಬೆಳಿಗ್ಗೆ 4.30ರ ಸುಮಾರಿಗೆ ರಾಜಧಾನಿ ದೆಹಲಿಗೆ ಬಂದಿಳಿದಿದ್ದಾರೆಂದು ವಿದೇಶಾಂಗ ಸಚಿವ ಎಸ್,ಜೈಶಂಕರ್ ಹೇಳಿದ್ದಾರೆ. ಅಲ್ಲದೆ, ಭಾರತೀಯ ಸ್ಥಳಾಂತರಕ್ಕೆ ಸಹಾಯ ಮಾಡಿದ ಜಪಾನ್ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 

ಡೈಮಂಡ್ ಪ್ರಿನ್ಸಸ್ ಹೆಸರಿನ ಕ್ರೂಸ್ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರವಾರದ ಪದ್ಮನಾಭನಗರದ ಯುವಕ ಅಭಿಷೇಕ್ ಸೇರಿ ಒಟ್ಟು 119ಮಂದಿ ಭಾರತೀಯರನ್ನು ಹೊರ ಬಿಡಲಾಗಿದೆ. ಅಭಿಷೇಕ್ ಕಳೆದ ಮೂರು ತಿಂಗಳಿಂದ ಡೈಮಂಡ್ ಪ್ರಿನ್ಸಸ್ ಹಡಗಿನ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಡಗು ಚೀನಾದಿಂದ ಜಪಾನ್'ಗೆ ತೆರಳುತ್ತಿತ್ತು. ಆದರೆ, ಕೊರೋನಾ ವೈರಸ್ ಆತಂಕದಿಂದ ಯುಕೋಮಾದಲ್ಲಿಯೇ ಫೆ.7ರಂದು ಜಪಾನ್ ಸರ್ಕಾರ ಕ್ರೂಸ್ ನ್ನು ತಡೆಹಿಡಿತ್ತು. 

20ಕ್ಕೂ ಹೆಚ್ಚು ದಿನಗಳಿಂದ ಈ ಹಡಗು ಯುಕೋಮಾದಲ್ಲಿಯೇ ಉಳಿದಿದೆ. ಜಪಾನ್ ಸರ್ಕಾರ ಹಡಗಿನಲ್ಲಿರುವ ಪ್ರಯಾಣಿಕರು, ಸಿಬ್ಬಂದಿಯನ್ನು ತಪಾಸಣೆಗೊಳಪಡಿಸಿದ್ದು, ಇವರಲ್ಲಿ ಅಭಿಷೇಕ್ ಸೇರಿ 119 ಮಂದಿ ಭಾರತೀಯರಿಗೆ ಸೋಂಕು ತಗುಲಿಲ್ಲ ಎಂಬುದು ಖಚಿತವಾಗಿದೆ. ಹಡಗಲ್ಲಿ 138 ಭಾತೀಯರು ಸೇರಿ 3,700 ಮಂದಿ ಇದ್ದರು. ಇರವಲ್ಲಿ 14 ಭಾರತೀಯರು ಸೇರಿ 700ಕ್ಕೂ ಹೆಚ್ಚು ಮಂದಿಗೆ ಕೋರೋನಾ ಸೋಂಕು ತಗುಲಿತ್ತು. 

SCROLL FOR NEXT