ದೇಶ

ಅಂಬೇಡ್ಕರ್-ಸಾವರ್ಕರ್ ಬಗ್ಗೆ ನೆಹರೂ ಹೊಟ್ಟೆಕಿಚ್ಚು ಪಡುತ್ತಿದ್ದರು: ಸುಬ್ರಮಣಿಯನ್ ಸ್ವಾಮಿ

Shilpa D

ಮುಂಬಯಿ:  ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಡಾ.ಬಿಆರ್ ಅಂಬೇಡ್ಕರ್ ಮತ್ತು ವೀರ್ ಸಾವರ್ಕರ್  ಅವರ ಬಗ್ಗೆ ಅಸೂಯೆ ಪಡುತ್ತಿದ್ದರು ಎಂದು ಬಿಜೆಪಿ ಮುಖಂಡ  ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

ನೆಹರು ಅವರಿಗೆ ಒಂದು ವಿಚಿತ್ರ ಕಾಯಿಲೆಯಿತ್ತು. ಯಾವಾಗಲೂ ಸದಾ ಬೇರೆಯವರ ಬಗ್ಗೆ ಅಸೂಯೆ ಪಡುತ್ತಿದ್ದರು, ಅಂಬೇಡ್ಕರ್ ಕೊಲಂಬಿಯಾಗೆ ತೆರಳಿ ಪಿಎಚ್ ಡಿ ಪಡೆದಿದ್ದರಿಂದ ಹೊಟ್ಟಿಕಿಚ್ಚು ಪಡುತ್ತಿದ್ದರು.

ಜೊತೆಗೆ ಕಾನೂನು ಪದವಿ ಪಡೆದು ವಾಪಸ್ ಬಂದರು, ಅವರು ಬಂದ ಮೇಲೆ ತಿದ್ದುಪಡಿ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾದರು.  ಇದಾದ ನಂತರ ನೆಹರು ಕೇಂಬ್ರಿಡ್ಜ್ ಗೆ ತೆರಳಿ ವಿಫಲರಾಗಿ ವಾಪಸಾದರು.

ವೀರ್ ಸಾವರ್ಕರ ಅವರ ಪುಣ್ಯ ಸ್ಮರಣೆ  ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮಿ,  ನೆಹರು ಸಾವರ್ಕರ್ ಅವರ ಬಗ್ಗೆಯೂ ಅಸೂಯೆ ಹೊಂದಿದ್ದರು, ಸಾವರ್ಕರ್ ಒಬ್ಬ ಪಂಡಿತ. ನೆಹರು ತಮ್ಮ ಹೆಸರಿನ ಮುಂದೆ ತಾವೇ ಪಂಡಿತ ಎಂದು ಸೇರಿಸಿಕೊಂಡರು ಎಂದ ಹೇಳಿದ್ದಾರೆ.
 

SCROLL FOR NEXT