ದೇಶ

ಸೈರಸ್ ಮಿಸ್ತ್ರಿ ಮರು ನೇಮಕ: ಮತ್ತೆ ಕೋರ್ಟ್ ಮೆಟ್ಟಿಲೇರಿದ ಟಾಟಾ ಪುತ್ರರು

Manjula VN

ನವದೆಹಲಿ: ದೇಶದ ಅತಿದೊಡ್ಡ ಕೈಗಾರಿಕಾ ಸಮೂಹ ಗುಂಪಿನ ಟಾಟಾ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ಸೈರಸ್ ಮಿಸ್ತ್ರಿ ಅವರು ಮರು ನೇಮಕವಾಗಿ ಹದಿನೈದು ದಿನ ಕಳೆಯುವ ಮುನ್ನವೇ ರತನ್ ಟಾಟಾ ಮಕ್ಕಳು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಟಾಟಾ ಕುಟುಂಬ ಹೊರತು ಪಡಿಸಿ ಈ ಹುದ್ದೆಗೆ ಅಲಂಕರಿಸಿದ ಮೊದಲ ವ್ಯಕ್ತಿ ಸೈರಸ್ ಮಿಸ್ತ್ರಿ. ಇದೀಗ ಟಾಟಾ ಮಕ್ಕಳು ಕೋರ್ಟ್ ಮೆಟ್ಟಿಲೇರಿರುವುದರಿಂದ ಟಾಟಾ ಕುಟುಂಬದಲ್ಲಿ ಈ ಬಗ್ಗೆ ಅಸಮಾಧಾನ ಅತೃಪ್ತಿ ಇರುವುದು ಗೋಚರವಾಗಿದೆ.

ಕೋರ್ಟ್ ಡಿಸೆಂಬರ್ 18ರಂದು ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ಅಧ್ಯಕ್ಷರನ್ನಾಗಿ ಮರುನೇಮಿಸಿ, ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನೇಮಕವಾಗಿದ್ದ ಎನ್.ಚಂದ್ರ ಅವರ ನೇಮಕಾತಿ ಅಕ್ರಮ ಎಂದು ಅಭಿಪ್ರಾಯಪಟ್ಟಿತ್ತು.

ಇದೇ ವರ್ಷದ ಜುಲೈನಲ್ಲಿ ಮೇಲ್ಮನವಿ ನ್ಯಾಯಾಧಿಕರಣ ತೀರ್ಪು ಕಾಯ್ದಿರಿಸಿತ್ತು. ಇದೇ ವಿಚಾರವಾಗಿ ದೀರ್ಘಕಾಲದ ವಿಚಾರಣೆ ನಂತರ ಆದೇಶ ಹೊರಬಂದಿತ್ತು. 2016ರ ಅಕ್ಟೋಬರ್ ನಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಕಂಪನಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು.

SCROLL FOR NEXT