ದೇಶ

ಪಾಕ್‌ನ ಮುಸ್ಲಿಂಯೇತರರು ಭಾರತಕ್ಕಲ್ಲದೆ ಇನ್ನೇನು ಇಟಲಿಗೆ ಹೋಗಬೇಕಾ?: ಕೇಂದ್ರ ಸಚಿವ ಕಿಶನ್ ರೆಡ್ಡಿ

Vishwanath S

ವಾರಣಾಸಿ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಭಾರತಕ್ಕಲ್ಲದೆ ಇನ್ನೇನು ಇಟಲಿಗೆ ಹೋಗಬೇಕಾ ಎಂದು ಕೇಂದ್ರ ಖಾತೆಯ ರಾಜ್ಯ ಗೃಹ ಸಚಿವ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ.

ನೆರೆ ರಾಷ್ಟ್ರಗಳಲ್ಲಿರುವ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಕ್ಕೆ ಆಶ್ರಯ ಮತ್ತು ಪೌರತ್ವ ನೀಡುವುದು ಭಾರತದ ನೈತಿಕ ಹೊಣೆಗಾರಿಕೆಯಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದು ನಮ್ಮ ಜವಾಬ್ದಾರಿ. ಒಂದು ವೇಳೆ ಅವರು ಭಾರತಕ್ಕೆ ಬರಬಾರದು ಎಂದಾದರೆ ಇನ್ನು ಎಲ್ಲಿಗೆ ಹೋಗಬೇಕು...ಇಟಲಿಗಾ ಎಂದು ಪ್ರಶ್ನಿಸಿದ್ದಾರೆ. 

ಹಿಂದೂಗಳು ಮತ್ತು ಸಿಖ್ ರನ್ನು ಇಟಲಿ ಸರ್ಕಾರ ಸ್ವೀಕರಿಸಲ್ಲ ಯಾಕೆಂದರೆ ಅವರೆಲ್ಲ ಬಡಜನರು ಎಂದು ಕಿಶನ್ ರೆಡ್ಡಿ ತಿಳಿಸಿದರು.

SCROLL FOR NEXT