ನಟ ದಿಲೀಪ್ 
ದೇಶ

ಮಲಯಾಳಂ ನಟಿ ಅಪಹರಣ ಕೇಸ್: ನಟ ದಿಲೀಪ್, ಇತರ 9 ಮಂದಿ ವಿರುದ್ಧ ಆರೋಪ ದಾಖಲು

ನಟಿ ಅಪಹರಣ ಪ್ರಕರಣದಲ್ಲಿ ನಟ ದಿಲೀಪ್ ಮತ್ತು ಇತರ ಒಂಬತ್ತು ಆರೋಪಿಗಳ ವಿರುದ್ಧ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ಸೋಮವಾರ ಆರೋಪಗಳನ್ನು ರೂಪಿಸಿದೆ ಅಲ್ಲದೆ ಪ್ರಕರಣದ ವಿಚಾರಣೆಯನ್ನು  ಮಂಗಳವಾರ ಪ್ರಾರಂಭಿಸಲು ನ್ಯಾಯಾಲಯ ನಿರ್ಧರಿಸುತ್ತದೆ.

ಕೊಚ್ಚಿ: ನಟಿ ಅಪಹರಣ ಪ್ರಕರಣದಲ್ಲಿ ನಟ ದಿಲೀಪ್ ಮತ್ತು ಇತರ ಒಂಬತ್ತು ಆರೋಪಿಗಳ ವಿರುದ್ಧ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ಸೋಮವಾರ ಆರೋಪಗಳನ್ನು ರೂಪಿಸಿದೆ ಅಲ್ಲದೆ ಪ್ರಕರಣದ ವಿಚಾರಣೆಯನ್ನು  ಮಂಗಳವಾರ ಪ್ರಾರಂಭಿಸಲು ನ್ಯಾಯಾಲಯ ನಿರ್ಧರಿಸುತ್ತದೆ.

ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ದಿಲೀಪ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತ್ರಿಶೂರ್ ಕೇಂದ್ರ ಕಾರಾಗೃಹದಿಂದ ಕರೆತಂದಾಗ ಟ್ರಾಫಿಕ್ ಬ್ಲಾಕ್ ಕಾರಣ ಪ್ರಧಾನ ಆರೋಪಿ ಪಲ್ಸರ್ ಸುನಿ ತುಸು ತಡವಾಗಿ ನ್ಯಾಯಾಲಯ ತಲುಪಿದ್ದರು. ಇತರ ಆರೋಪಿಗಳಾದ ಮಾರ್ಟಿನ್ ಆಂಟನಿ, ವಿಜೇಶ್, ಸಲೀಮ್, ಪ್ರದೀಪ್, ಚಾರ್ಲಿ ಥಾಮಸ್, ಸನಾಲ್ ಕುಮಾರ್ ಮತ್ತು ವಿಷ್ಣು ನ್ಯಾಯಾಲಯಕ್ಕೆ ಹಾಜರಾಗಿದ್ದರು.ಬೆಳಿಗ್ಗೆ 11.10 ರ ಸುಮಾರಿಗೆ ನ್ಯಾಯಾಲಯವು ಮುಚ್ಚಿದ ಬಾಗಿಲುಗಳ ಹಿಂದೆ ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಲು ಪ್ರಾರಂಭಿಸಿತು. ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರತಿ ಆರೋಪಿಗಳ ವಿರುದ್ಧ ಹೊರಿಸಲಾದ ಅಪರಾಧಗಳು ಸೇರಿದಂತೆ ಚಾರ್ಜ್‌ಶೀಟ್‌ನ ಸಂಬಂಧಿತ ಭಾಗಗಳನ್ನು ಆರೋಪಿಗಳಿಗೆ ಓದಿ ಹೇಳಲಾಗುತ್ತದೆ ಇನ್ನು  ನ್ಯಾಯಾಲಯ ದಾಖಲಿಸಿದ ಪ್ರಕರಣದಲ್ಲಿ ದಿಲೀಪ್ ಸೇರಿದಂತೆ ಎಲ್ಲ ಆರೋಪಿಗಳು ತಪ್ಪಿತಸ್ಥರೆಂದು ಒಪ್ಪಿಕೊಂಡರು.

ಆರೋಪಿಗಳ ವಿರುದ್ಧ ವಿವಿಧ ಆರೋಪಗಳಡಿ - ಐಪಿಸಿ ಸೆಕ್ಷನ್ 120 (ಎ), 120 (ಬಿ), 109, 342, 366,354, 354 (ಬಿ), 376 (ಬಿ), 106 (1), 201, 212, 34, ಐಟಿ ಕಾಯ್ದೆ- 66 (ಇ) ಮತ್ತು 66 (ಎ). ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.

ಇದಾಗಿ  ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲು ನ್ಯಾಯಾಲಯವು ದಿನಾಂಕವನ್ನು ಮಂಗಳವಾರಕ್ಕೆ ನಿಗದಿ ಮಾಡಿದೆ. ಪರೀಕ್ಷಿಸಬೇಕಾದ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಸೂಚಿಸಿದ್ದು ಪ್ರಾಸಿಕ್ಯೂಷನ್ ಮಂಗಳವಾರ ಈ ಪಟ್ಟಿಯನ್ನು ಸಲ್ಲಿಸಲಿದೆ. ಈ ಪ್ರಕರಣದಲ್ಲಿ 359 ಸಾಕ್ಷಿಗಳಿದ್ದಾರೆ.ಸಾಕ್ಷಿಗಳ ಹೊರತಾಗಿಪರೀಕ್ಷಿಸಲು 616 ದಾಖಲೆಗಳು ಮತ್ತು 250ವಸ್ತುಗಳು ಇವೆ. ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸುವ ಪ್ರಕ್ರಿಯೆಯು ಸುಮಾರು ಒಂದು ಗಂಟೆ ಕಾಲ ನಡೆಯಿತು ಮತ್ತು ಮಧ್ಯಾಹ್ನ 12.10 ಕ್ಕೆ ಕೊನೆಗೊಂಡಿತು.

ಈ ಹಿಂದೆ ನಟ ದಿಲೀಪ್ ಸಲ್ಲಿಸಿದ್ದ ಡಿಸ್ಚಾರ್ಜ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ದಿಲೀಪ್ ಶೀಘ್ರದಲ್ಲೇ ಉನ್ನತ ನ್ಯಾಯಾಲಯವನ್ನು ಸಂಪರ್ಕಿಸುವ ಸಾಧ್ಯತೆಯಿದೆ.

ಫೆಬ್ರವರಿ 17, 2017 ರಂದು, ಮಲಯಾಳಂ ಚಲನಚಿತ್ರ ನಟಿಯನ್ನು ಅಪಹರಿಸಿ  ಕಿರುಕುಳ ನೀಡಿದ್ದಲ್ಲದೆ  ದಾಳಿಯ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ. ದಿಲೀಪ್ ಅವರನ್ನು ಜುಲೈ 10, 2017 ರಂದು ಬಂಧಿಸಲಾಗಿದ್ದು  ಕಳೆದ ವರ್ಷ, ಸಂತ್ರಸ್ತೆಯ ದೃಶ್ಯಗಳ ನಕಲು ಕೋರಿ ದಿಲೀಪ್ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದಾಗ, ಪ್ರಕರಣದ ವಿಚಾರಣೆಯನ್ನು ಆರು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಲು ನ್ಯಾಯಾಲಯವು ನಿರ್ದೇಶಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT