ದೇಶ

ಭಾರತೀಯ ರಾಜಕಾರಣದ 3 'ಶಾಪಗಳನ್ನು ತೆಗೆದು ಹಾಕಿದ ಮೋದಿ ‘ಕರ್ಮಯೋಧ’: ಅಮಿತ್ ಶಾ

Shilpa D

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ‘ಓಲೈಕೆ’, ಜಾತಿವಾದ ಮತ್ತು ಸ್ವಜನ ಪಕ್ಷಪಾತವೆಂಬ ಭಾರತೀಯ ರಾಜಕಾರಣದ ಮೂರು 'ಶಾಪಗಳನ್ನು' ತೆಗೆದುಹಾಕಿದ್ದಾರೆ ಅವರು ಕರ್ಮಯೋಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪ್ರಧಾನಮಂತ್ರಿಯವರ ಜೀವನ ಕುರಿತಾದ 'ಕರ್ಮಯೋಧ ಗ್ರಂಥ' ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿ ಜೀ ಅವರು 'ಕರ್ಮಯೋಧ' , ರಾಜಕಾರಣಿ, ಕಠಿಣ ಕಾರ್ಯದ ಮಾಸ್ಟರ್, ಸಮರ್ಥ ನಿರ್ವಾಹಕರು ಮತ್ತು ಕಾರ್ಯತತ್ಪರತೆಯಿಂದ ದೇಶ ಮುನ್ನಡೆಸುವ ಆದರ್ಶ ನಾಯಕ. ಈ ಎಲ್ಲ ಗುಣಗಳನ್ನು ಮೋದಿ ಅವರು ನಿರೂಪಿಸಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ್ದು, ತನ್ನ ಮೇಲೆ ಆಕ್ರಮಣವನ್ನು ಸಹಿಸುವುದಿಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370, 35 ಎ ರದ್ಧತಿ, ಪೌರತ್ವ ತಿದ್ದುಪಡಿ ಕಾಯ್ದೆ 2019, ರಾಮ್ ಮಂದಿರ ಸಮಸ್ಯೆಯನ್ನು ಬಗೆಹರಿಸುವುದು, ಟ್ರಿಪಲ್ ತಲಾಖ್, ಸರ್ಜಿಕಲ್ ಸ್ಟ್ರೈಕ್  ಮತ್ತು ಬಾಲಕೋಟ್ ವೈಮಾನಿಕ ದಾಳಿ ಸೇರಿದಂತೆ ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ  ಎಂದು ತಿಳಿಸಿದ್ದಾರೆ.

SCROLL FOR NEXT