ದೇಶ

ಕೊಲೆ ಯತ್ನ ಪ್ರಕರಣ ದಾಖಲಿಸಿದ ಜೆಎನ್'ಯು ಅಧ್ಯಕ್ಷೆ ಆಯಿಷಾ ಘೋಷ್

Manjula VN

ನವದೆಹಲಿ: ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಿಂಸಾಚಾರದ ವೇಳೆ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಜೆಎನ್'ಯು ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷ ಆಯಿಷಾ ಘೋಷ್ ದೂರು ದಾಖಲಿಸಿದ್ದಾರೆ. 

ವಿಶ್ವವಿದ್ಯಾಲಯದಲ್ಲಿ ನಡೆದ ಘರ್ಷಣೆ ವೇಳೆ ದಾಳಿ ನಡೆಸಿದ ವ್ಯಕ್ತಿಗಳು ಪಿತೂರಿ ನಡೆಸಿ ನನ್ನ ಮೇಲೆ ಕೊಲೆ ಯತ್ನ ನಡೆಸಿದ್ದರು. ಹೀಗಾಗಿ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಜನವರಿ 5 ರಂದು ಮಾಹಿತಿಯೊಂದು ಬಂದಿತ್ತು. ಎಬಿವಿಪಿಗೆ ಸೇರಿದ ಕೆಲವರು ಶಸ್ತ್ರಾಸ್ತ್ರಗಳನ್ನು ಹಿಡಿದು ವಿವಿ ಆವರಣಕ್ಕೆ ಬಂದಿದ್ದು, ದಾಳಿ ನಡೆಸಿದ್ದಾರೆಂದು ಕೆಲ ವಿದ್ಯಾರ್ಥಿಗಳು ತಿಳಿಸಿದ್ದರು. 

ಘಟನಾ ಸ್ಥಳದಲ್ಲಿ ಮತ್ತೊಬ್ಬ ವಿದ್ಯಾರ್ಥಿ ನಿಖಿಲ್ ಮ್ಯಾಥ್ಯೊ ಜೊತೆಗೆ ನಾನೂ ಕೂಡ ಸ್ಥಳದಲ್ಲಿಯೇ ಇದ್ದೆ. ದಾಳಿ ನಡೆಸಿದ್ದ ವ್ಯಕ್ತಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದರು. 20-30 ಮಂದಿ ನನ್ನ ಸುತ್ತಲೂ ನಿಂತಿದ್ದರು, ಮನವಿ ಮಾಡಿಕೊಂಡರೂ ಬಿಡಲಿಲ್ಲ. ನನ್ನ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದರು. ಗುಂಪಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಮಾರಸ್ಕ್ ಧರಿಸಿರಲಿಲ್ಲ. ಆತನನ್ನು ನಾನು ಗುರುತು ಹಿಡಿಯುತ್ತೇನೆ. ಕಬ್ಬಿಣದ ಸಲಾಖೆಯಿಂದ ನನ್ನ ತಲೆಗೆ ಹಲವು ಬಾರಿ ಹೊಡೆದರು. ಕಳೆಗೆ ಬಿದ್ದ ನನ್ನ ತಲೆಯಿಂದ ರಕ್ತ ಸೋರಲು ಆರಂಭಿಸಿತ್ತು. ಕೆಲವರು ನನ್ನನ್ನು ಕಾಲಿನಿಂದ ಒದ್ದರಲು. ಕೆಲವರು ಹೊಡೆಯುವುದನ್ನು ಮುಂದುವರೆಸಿದ್ದರು ಎಂದು ತಿಳಿಸಿದ್ದಾರೆ. 

ಗಾಯಗೊಂಡಿದ್ದ ನನನಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ಕುರಿತು ದೂರಿನಲ್ಲಿ ದಾಖಲೆಗಳನ್ನು ಸಲ್ಲಿಸಲಾಗಿದೆ. ದಾಳಿ ವೇಳೆ ನಿಖಿಲ್ ಮ್ಯಾಥ್ಯೂ ನನ್ನನ್ನು ರಕ್ಷಣೆ ಮಾಡಲು ಯತ್ನಿಸಿದ್ದರು. ಆದರೆ, ಆತನ ಮೇಲೂ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ದಾಳಿಯ ಯತ್ನಗಳನ್ನು ನೋಡಿದರೆ, ನನ್ನನ್ನು ಹತ್ಯೆ ಮಾಡಲು ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.ೃ

SCROLL FOR NEXT