ಜೆಎನ್ ಯು ಗೆ ದೀಪಿಕಾ ಪಡುಕೋಣೆ ಭೇಟಿ: ಪ್ರಕಾಶ್ ರಾಜ್ ಹೇಳಿದ್ದೇನು?
ನಟಿ ದೀಪಿಕಾ ಪಡುಕೋಣೆ ಜವಹರ್ ಲಾಲ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದಕ್ಕೆ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ
ಬೆಂಗಳೂರು: ನಟಿ ದೀಪಿಕಾ ಪಡುಕೋಣೆ ಜವಹರ್ ಲಾಲ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದಕ್ಕೆ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ.
ದೀಪಿಕಾ ನೀವು ರೀಲ್ ಮತ್ತು ರಿಯಲ್ ನಲ್ಲಿಯೂ ಬೋಲ್ಡ್ ಎಂದು ಫೋಟೋ ಹಾಕಿ ನಟ ಪ್ರಕಾಶ್ ರೈ ಮೆಚ್ಚುಗೆ ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆ ಅವರ ನಟನೆಯ ಪದ್ಮಾವತ್, ಬಾಜೀರಾವ್ ಮಸ್ತಾನಿ, ರಾಮ್ಲೀಲಾ ಮತ್ತು ಛಪಾಕ್ ಸಿನಿಮಾದ ಫೋಟೋ ಹಾಕಿದ್ದಾರೆ.
ಕೆಳಗೆ ಜೆಎನ್ಯುಗೆ ಭೇಟಿ ನೀಡಿರುವ ಫೋಟೋ ಹಾಕಿದ್ದಾರೆ. ರೀಲ್ ಮತ್ತು ರಿಯಲ್ ಲೈಫ್ ನಲ್ಲಿ ನೀವು ಧೈರ್ಯವಂತೆ (ಬೋಲ್ಡ್) ಎಂದು ಬರೆಯಲಾಗಿದೆ.
ನಿಜವಾದ ಭಾರತೀಯಳಾಗಿರುವುದಕ್ಕೆ ದೀಪಿಕಾ ಪಡುಕೋಣೆ ಅವರಿಗೆ ಧನ್ಯವಾದ ಎಂದು ಪ್ರಕಾಶ್ ರೈ ಬರೆದುಕೊಂಡಿದ್ದಾರೆ.
ಪ್ರಕಾಶ್ ರೈ ಟ್ವೀಟ್ ಗೆ ಪರ-ವಿರೋಧ ಚರ್ಚೆಗಳ ಆರಂಭಗೊಂಡಿವೆ. ಕೆಲವರು ದೀಪಿಕಾ ಪಡುಕೋಣೆ ಅವರ ನಡೆಗೆ ತಮ್ಮ ಬೆಂಬಲ ಸೂಚಿಸಿದ್ರೆ, ಮತ್ತೆ ಕೆಲವರು ಸಿನಿಮಾ ಪ್ರಚಾರಕ್ಕಾಗಿ ದೀಪಿಕಾ ಜೆಎನ್ಯು ವಿಷಯವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.