ದೇಶ

ಭಾರತೀಯರ ರಕ್ಷಣೆಗೆ ಐಎನ್ಎಸ್ ತ್ರಿಖಂಡ್: ರವೀಶ್ ಕುಮಾರ್

Srinivasamurthy VN

ನವದೆಹಲಿ: ಇರಾನ್ ನಲ್ಲಿ ಉಂಟಾಗಿರುವ ಪ್ರಕ್ಷಬ್ದ ಪರಿಸ್ಥಿತಿಯ ಹಿನ್ನಲೆಯಲ್ಲಿ ಅಗತ್ಯವೆನಿಸಿದರೆ ಭಾರತೀಯರನ್ನು ಸ್ಥಳಾಂತರಿಸಲು ಐಎನ್ ಎಸ್ ತ್ರಿಖಂಡ್ ಅನ್ನು ಅಲ್ಲಿಗೆ ಕಳುಹಿಸುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಳೆದ ವರ್ಷದ ನವೆಂಬರ್ ನಿಂದ ಭಾರತೀಯ ನೌಕಾ ಪಡೆಯ ಹಡಗು ಐಎನ್ ಎಸ್ ತ್ರಿಖಂಡ್ ಗಲ್ಫ್ ಆಫ್ ಒಮಾನ್ ನಲ್ಲಿದೆ. ಒಂದು ವೇಳೆ ಅಗತ್ಯಬಿದ್ದರೆ ಇರಾನ್ ನಿಂದ ಭಾರತೀಯರನ್ನು ಸ್ಥಳಾಂತರಿಸಲು ತ್ರಿಖಂಡ್ ನೌಕೆಯನ್ನು ಕಳುಹಿಸಲಾಗುವುದು ಎಂದರು. 

ಕಳೆದ ವರ್ಷದ ನವೆಂಬರ್ ನಿಂದ ಭಾರತೀಯ ನೌಕಾ ಪಡೆಯ ಹಡಗು ಐಎನ್ ಎಸ್ ತ್ರಿಖಂಡ್ ಗಲ್ಫ್ ಆಫ್ ಒಮಾನ್ ನಲ್ಲಿದೆ. ಒಂದು ವೇಳೆ ಅಗತ್ಯವಿದ್ದರೆ ಇರಾನ್ ನಿಂದ ಭಾರತೀಯರನ್ನು ಸ್ಥಳಾಂತರಿಸಲು ತ್ರಿಖಂಡ್ ಅನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.

ಅಮೆರಿಕ ಇರಾನ್ ನಡುವಿನ ಭೌಗೋಳಿಕ-ರಾಜಕೀಯ ಸಂಘರ್ಷದ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. 

ಅಮೆರಿಕ ವಾಯುಪಡೆ ದಾಳಿ ನಡೆಸುವ ಮೂಲಕ ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಹತ್ಯೆಗೈದಿರುವ ಹಿನ್ನೆಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿದೆ. ಆದರೆ ಉಭಯ ದೇಶಗಳು ಯುದ್ಧಕ್ಕೆ ಮುಂದಾಗದೆ ಮಾತುಕತೆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.

SCROLL FOR NEXT