ದೇಶ

ನಿರ್ಭಯ ಪ್ರಕರಣ: ಜ.14 ರಂದು ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ವಿಚಾರಣೆ 

Srinivas Rao BV

ನವದೆಹಲಿ: ನಿರ್ಭಯ ಪ್ರಕರಣದಲ್ಲಿ ಈಗಾಗಲೇ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಸಲ್ಲಿಸಿರುವ ಕ್ಯುರೇಟಿವ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜ.14 ರಂದು ನಡೆಸಲಿದೆ. ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಅರುಣ್ ಮಿಶ್ರಾ, ಆರ್ ಎಫ್ ನಾರಿಮನ್, ಆರ್ ಭಾನುಮತಿ ಹಾಗೂ ಅಶೋಕ್ ಭೂಷಣ್ ಇರುವ ಪಂಚ ಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. 

ವಿನಯ್ ಶರ್ಮ ಹಾಗು ಮುಖೇಶ್ ಕ್ಯುರೆಟಿವ್ ಅರ್ಜಿ ಸಲ್ಲಿಸಿರುವ ಆರೋಪಿಗಳಾಗಿದ್ದಾರೆ. ಕ್ಯುರೇಟಿವ್ ಅರ್ಜಿಗಳನ್ನು ನ್ಯಾಯಾಧೀಶರ ಕಚೇರಿಯಲ್ಲೇ ನಿರ್ಧಾರ ಮಾಡಲಾಗುತ್ತದೆ ಹಾಗೂ ಓರ್ವ ವ್ಯಕ್ತಿ ಕಾನೂನಿನಲ್ಲಿ ಪಡೆಯಬಹುದಾದ ಕೊನೆಯ ಹಂತದ ಪ್ರಯತ್ನ ಇದಾಗಿದೆ. ಅಕ್ಷಯ್ ಹಾಗೂ ಪವನ್ ಗುಪ್ತಾಗೆ ದೆಹಲಿ ಕೋರ್ಟ್ ಮರಣ ದಂಡನೆ ವಾರೆಂಟ್ ಜಾರಿ ಮಾಡಿದ್ದು ಕ್ಯುರೇಟಿವ್ ಅರ್ಜಿಗಳಿಗೆ ಈ ಅಪರಾಧಿಗಳು ಅರ್ಹರಾಗಿರುವುದಿಲ್ಲ.

SCROLL FOR NEXT