ಸಂಗ್ರಹ ಚಿತ್ರ 
ದೇಶ

ಜಮ್ಮು-ಕಾಶ್ಮೀರದಲ್ಲಿ ಎನ್'ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ತ್ರಾಲ್ ನಲ್ಲಿ ಭಾರತೀಯ ಸೇನಾಪಡೆ ಎನ್'ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆರುಳುಸಿದೆ. 

ಜಮ್ಮು: ಜಮ್ಮು ಮತ್ತು ಕಾಶ್ಮೀರದ ತ್ರಾಲ್ ನಲ್ಲಿ ಭಾರತೀಯ ಸೇನಾಪಡೆ ಎನ್'ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆರುಳುಸಿದೆ. 

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ನಲ್ಲಿ ಉಗ್ರರು ಅಡಗಿ ಕುಳಿತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸೇನಾಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಈ ವೇಳೆ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಕಾರ್ಯಾಚರಣೆಯನ್ನು ಎನ್'ಕೌಂಟರ್ ಆಗಿ ಮಾರ್ಪಡಿಸಿದ ಸೇನಾಪಡೆ ಇದೀಗ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ. 

ಇದರಂತೆ ದಕ್ಷಿಣ ಕಾಶ್ಮೀರದ ಗುಲ್ಶಾನ್ಪೊರ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೇನಾಪಡೆ ಕಾರ್ಯಾಚರಣೆ ನಡೆಸುತ್ತಿವೆ ಎಂದು ವರದಿಗಳು ತಿಳಿಸಿವೆ. 

ಇನ್ನು ಸೋಪಿಯಾನ್ ಜಿಲ್ಲೆಯ ನರ್ಬಾಲ್ ಒಮ್ಪೊರಾ ಪ್ರದೇಶದಲ್ಲಿ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿರುವ ಸೇನಾಪಡೆ, ಶಸ್ತ್ರಾಸ್ತ್ರಗಳು ಹಾಗೂ ಕೆಲ ಪ್ರಮುಖ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ: ಇರಾನ್ ಪ್ರಮುಖ ಸೇತುವೆ ಧ್ವಂಸ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬನ್ನಿ; ಟೆಹ್ರಾನ್'ಗೆ ಟ್ರಂಪ್ ಎಚ್ಚರಿಕೆ

ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

LPG ಬಿಕ್ಕಟ್ಟು ತೀವ್ರ: ಬೆಂಗಳೂರಿನ ಆಟೋ ಚಾಲಕರ ಬದುಕು ಬೀದಿಗೆ!

IPL 2026: ರನ್ ಕದಿಯಲು ಹೋಗಿ ರನೌಟ್ ಆದ ರಘುವಂಶಿ, ಮೈದಾನದಲ್ಲೇ ಸಿಟ್ಟಾದ ರಿಂಕ್ ಸಿಂಗ್ !Video

"ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ": ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಮಂಗಳಾರತಿ!

SCROLL FOR NEXT