ದೇಶ

ಜೆಎನ್ ಯು ಹಿಂಸಾಚಾರ:ಮತ್ತೆ ಏಳು ಮಂದಿ ಶಂಕಿತರನ್ನು ಗುರುತಿಸಿದ ಎಸ್ ಐಟಿ 

Sumana Upadhyaya

ನವದೆಹಲಿ; ಕಳೆದ ಜನವರಿ 5ರಂದು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಮತ್ತೆ ಏಳು ಮಂದಿಯನ್ನು ಗುರುತಿಸಿದೆ. 


ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳು ಮತ್ತು ವಿಡಿಯೊಗಳ ಆಧಾರದ ಮೇಲೆ ಶಂಕಿಸಲಾಗಿದೆ.ಅಲ್ಲದೆ ಹಾಸ್ಟೆಲ್ ನ ವಾರ್ಡನ್, ಸೆಕ್ಯುರಿಟಿ ಗಾರ್ಡ್ ಮತ್ತು ಐವರು ವಿದ್ಯಾರ್ಥಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.


60 ಮಂದಿಯ ವಾಟ್ಸಾಪ್ ಗ್ರೂಪ್ ನಿಂದ 37 ಮಂದಿಯನ್ನು  ವಿಶೇಷ ತನಿಖಾ ತಂಡ ಈಗಾಗಲೇ ಶಂಕಿತರೆಂದು ಗುರುತಿಸಿದೆ. 
ಕಳೆದ 5ರಂದು ಜೆಎನ್ ಯುನಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆದ ನಂತರ ಈ ವಾಟ್ಸಾಪ್ ಗ್ರೂಪ್ ಎಡಪಂಥೀಯ ವಿರುದ್ಧ ಸೃಷ್ಟಿ ಮಾಡಲಾಗಿದೆ.

SCROLL FOR NEXT