ದೇಶ

ಏ.1ರಿಂದ ದೇಶದಾದ್ಯಂತ ಎನ್'ಪಿಆರ್ ಆರಂಭ

Manjula VN

ನವದೆಹಲಿ: ದೇಶದಾದ್ಯಂತ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್'ಪಿಆರ್) ಪ್ರಕ್ರಿಯೆ ಹಾಗೂ ಜನಗಣತಿ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಸಭೆಯೊಂದನ್ನು ಕರೆದಿದೆ. 

ಕೇಂದ್ರ ಗೃೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆಂದು ವರದಿಗಳು ತಿಳಿಸಿವೆ. 

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಜನಗಣತಿ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ. ಪ್ರಕ್ರಿಯೆಯನ್ನು ಯಾವ ರೀತಿ ನಡೆಸಬೇಕು ಎಂಬುದರ ಕಾರ್ಯವಿಧಾನದ ಬಗ್ಗೆ ಸಭೆ ಚರ್ಚಿಸಲಿದೆ ಎಂದು ಗೃಹ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈಗಾಗಲೇ ಎನ್'ಪಿಆರ್  ನಡೆಸಲ್ಲ ಎಂದು ಪಶ್ಚಿಮ ಬಂಗಾಳ ಹಾಗೂ ಕೇರಳ ಮುಖ್ಯಮಂತ್ರಿಗಳು ಹೇಳಿದ್ದು, ಇಲ್ಲಿ ಗಮನಾರ್ಹ. ಈ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದಿದೆ. 

ಮನೆಗಣತಿಯನ್ನು ಏ.1ರಿಂದ ನಡೆಸಲಾಗುವುದು ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಎನ್'ಪಿಆರ್ ಗಣತಿ ಬಗ್ಗೆ ಅದು ಇದೇ ಮೊದಲ ಬಾರಿಗೆ ಮಾಹಿತಿ ನೀಡಿದೆ. 

SCROLL FOR NEXT