ದೇಶ

ಆರ್‌ಎಸ್‌ಎಸ್‌ಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ- ಮೋಹನ್ ಭಾಗವತ್ 

Nagaraja AB

ಮೊರಾದಾಬಾದ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅದರ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದೇಶದಲ್ಲಿ ಮಾನವೀಯ ಗುಣಗಳು, ಸಂಸ್ಕೃತಿ ಹಾಗೂ ಮಾನವೀಯತೆಯನ್ನು ಎತ್ತಿ ಹಿಡಿಯುವುದು ಮಾತ್ರ  ಆರ್ ಎಸ್ ಎಸ್ ಕೆಲಸವಾಗಿದೆ ಎಂದಿದ್ದಾರೆ.

ಆರ್ ಎಸ್ ಎಸ್ ಕಾರ್ಯಕರ್ತರೊಂದಿಗಿನ ನಾಲ್ಕು ದಿನಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಗೂ ನಮಗೂ ಸಂಬಂಧವಿಲ್ಲ, ಕಳೆದ 60 ವರ್ಷಗಳಿಂದಲೂ ದೇಶದಲ್ಲಿನ ಮೌಲ್ಯಗಳನ್ನು ರಕ್ಷಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಆರ್ ಎಸ್ ಎಸ್ ಬಿಜೆಪಿಯ ರಿಮೋಟ್ ಕಂಟ್ರೋಲಿಂಗ್ ಎಂಬುದನ್ನು ನಿರಾಕರಿಸಿದ ಅವರು, ದೇಶದ ಎಲ್ಲಾ 130 ಕೋಟಿ ಜನರಿಗಾಗಿ ಆರ್ ಎಸ್ ಎಸ್ ಕೆಲಸ ಮಾಡುತ್ತಿದೆ ಎಂದರು

ಸಮಾಜದಲ್ಲಿನ ತಾರತಮ್ಯ ತೊಡೆದುಹಾಕಲು ಹಾಗೂ ದೇಶದ ಪ್ರಗತಿಗೆ ಸಂಘ ಶ್ರಮಿಸುತ್ತಿದೆ. ದೇಶೀಯ ಜನರ ನಡುವೆ ಸಮನ್ವಯತೆ ಅಗತ್ಯವಾಗಿದೆ. ನಾನು ಸರಿಯಾಗಿದ್ದೇನೆ, ನೀನೂ ಸರಿಯಾಗಿರಬೇಕುಎಂಬ ಭಾವನೆ ನಮ್ಮಲ್ಲಿ ಇರಬೇಕು. ದೇಶದಲ್ಲಿ ಎಲ್ಲೂ ತಾರತಮ್ಯ ಇರಬಾರದು ಎಂದು ಹೇಳಿದರು.  

ಭಾರತದ ಧರ್ಮ ಅತಿ ವಿಶಿಷ್ಟವಾಗಿದ್ದು, ಇದು ಆಧ್ಯಾತ್ಮಿಕತೆಯನ್ನು ಆಧರಿಸಿದೆ. ಭಾರತದಲ್ಲಿ ಧರ್ಮಗಳು ಭಿನ್ನವಾಗಿ ಕಂಡರೂ ಎಲ್ಲವೂ ಒಂದೇ ಎಂದು ಅವರು ಹೇಳಿದರು.    
 

SCROLL FOR NEXT