ದೇಶ

ಚಹಾ ಉತ್ಪಾದನೆ ಕಾರ್ಮಿಕರ ಮೇಲೆ ಅವಲಂಬಿತ: ಐಟಿಎ

Srinivas Rao BV

ಕೋಲ್ಕತ್ತಾ: ಚಹಾ ತೋಟದ, ವಿಶೇಷವಾಗಿ ಮಹಿಳಾ ಕಾರ್ಮಿಕರ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ದೇಶದ ಚಹಾ ಉತ್ಪಾದನೆ ಹೆಚ್ಚಾಗಲಿದೆ ಎಂದು ಭಾರತೀಯ ಚಹಾ ಸಂಘ (ಐಟಿಎ) ಹೇಳಿದೆ.

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಸಂಘಟನೆಯ ಡೂಯರ್ಸ್ ಶಾಖೆಯ 142 ನೇ ವಾರ್ಷಿಕ ಸಮಾವೇಶ  ಉದ್ದೇಶಿಸಿ ಐಟಿಎ ಉಪಾಧ್ಯಕ್ಷ ನಯನತರಾ ಪಾಲ್ಚೌಧುರಿ, ಇತ್ತೀಚಿನ ಅಧ್ಯಯನದ ಪ್ರಕಾರ ಚಹಾತೋಟದ ಅನೇಕ ಮಹಿಳಾ ಕಾರ್ಮಿಕರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಅವರ ಆರೋಗ್ಯ ಸರಿಯಾಗಬೇಕು ಮತ್ತುಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು. ಮಹಿಳಾ ಕಾರ್ಮಿಕರಿಗೆ ಕಡಿಮೆ ದರದಲ್ಲಿ ನೈರ್ಮಲ್ಯ ಕರವಸ್ತ್ರವನ್ನು ಒದಗಿಸುವ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.

SCROLL FOR NEXT