ದೇಶ

ದೆಹಲಿ ಚುನಾವಣೆ: ಕೇಜ್ರಿವಾಲ್ ವಿರುದ್ಧ ಸ್ಪರ್ಧೆಗಿಳಿದ ಕನ್ನಡಿಗ ವೆಂಕಟೇಶ್ವರ ಸ್ವಾಮಿ

Manjula VN

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕನ್ನಡಿಗ ವೆಂಕಟೇಶ್ವರ ಸ್ವಾಮೀಜಿಗಳು ಸ್ಪರ್ಧೆಗಿಳಿದಿದ್ದಾರೆ. 

ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶ್ವರ ಸ್ವಾಮೀಜಿಗಳು ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿದಿದ್ದಾರೆಂದು ತಿಳಿದುಬಂದಿದೆ. 

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲಾ ಗ್ರಾಮದವರಾಗಿರುವ ವೆಂಕಟೇಶ್ವರ ಮಹಾ ಸ್ವಾಮೀಜಿ ಕಾಂಗ್ರೆಸ್, ಬಿಜೆಪಿ, ಎನ್'ಸಿಪಿಯಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದರು. ಇದೀಗ ಜನವರಿ 14 ರಂದು ಪಕ್ಷೇತ್ರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ. 

ವೆಂಕಟೇಶ್ವರ ಸ್ವಾಮೀಜಿಗಳ ಬಳಿ ರೂ.9 ನಗದಿದ್ದು, ರೂ.99,999 ಸಾಲವಿದೆ ಎಂದು ಚುನಾವಣಾ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ಅವರು ಈ ಹಿಂದೆಯೂ ಕರ್ನಾಟಕ, ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ ಗೋವಾಗಳಲ್ಲಿ ಗ್ರಾಮ ಪಂಚಾಯಿತಿಯಿದಂ ಹಿಡಿದು ಲೋಕಸಭೆಯವರೆಗೂ ಒಟ್ಟು 18 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಇವರ ಪೂರ್ವಾಶ್ರಮದ ಹೆಸರು ದೀಪಕ್ ಎಂದು ತಿಳಿದುಬಂದಿದೆ. 

SCROLL FOR NEXT