ದೇಶ

ಭಾರತ ಜಾತ್ಯತೀತ ರಾಷ್ಟ್ರ, ಪಾಕ್ ನಂತೆ ಧರ್ಮಾಧರಿತ ದೇಶವಲ್ಲ-ರಾಜನಾಥ್ ಸಿಂಗ್

Srinivas Rao BV

ನವದೆಹಲಿ: ಭಾರತ ಜಾತ್ಯತೀತ ದೇಶವಾಗಿದ್ದು, ಎಲ್ಲ ಧರ್ಮಗಳನ್ನು ಸಮನಾಗಿ ಪರಿಗಣಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 

ದೆಹಲಿಯಲ್ಲಿಂದು ಗಣರಾಜ್ಯೋತ್ಸವ ಅಂಗವಾಗಿ ಎನ್ ಸಿಸಿ ಶಿಬಿರದಲ್ಲಿ ಮಾತನಾಡಿದ ಅವರು, ಭಾರತ ಎಂದಿಗೂ ಧರ್ಮಗಳ ನಡುವೆ ತಾರತಮ್ಯ ಮಾಡಿಲ್ಲ. ಅದು ದೇಶಕ್ಕೆ ಬೇಕಾಗಿಯೂ ಇಲ್ಲ. ಆದರೆ ನೆರೆಯ ಪಾಕಿಸ್ತಾನ ಧರ್ಮ ಆಧರಿತ ದೇಶವವಾಗಿದೆ. ಅದರಂತೆ ನಾವೂ ಘೋಷಣೆ ಮಾಡಿಕೊಂಡಿಲ್ಲ. ಅಮೆರಿಕ ಸಹ ಧರ್ಮ ಆಧಾರದ ಮೇಲೆ ಸರ್ಕಾರ ನಡೆಯುವ ದೇಶವಾಗಿದೆ. ಭಾರತ ಇಡೀ ವಿಶ್ವ ಒಂದು ಕುಟುಂಬ ಎಂಬುದರ ಮೇಲೆ ನಂಬಿಕೆ ಇಟ್ಟಿದೆ ಎಂದು ಹೇಳಿದ್ದಾರೆ.

ತನ್ನ ಧರ್ಮ ಹಿಂದು, ಸಿಖ್ ಇಲ್ಲವೇ ಬೌದ್ಧ ಎಂದು ಭಾರತ ಎಂದೂ ಘೋಷಿಸಿಕೊಂಡಿಲ್ಲ. ಇಲ್ಲಿ ಎಲ್ಲ ಧರ್ಮೀಯರು ಸಮಾನ ಸ್ವಾತಂತ್ರದಿಂದ ವಾಸಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಸಚಿವರು ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವರ ಪದಕ ವನ್ನು ಅತ್ಯತ್ತಮ ಸಾಧನೆ ತೋರಿದ ಎನ್ ಸಿಸಿ ಕೆಡೆಟ್ ಗಳಿಗೆ ಪ್ರದಾನ ಮಾಡಿದರು. ಯುವ ಜನತೆಯಲ್ಲಿ ರಾಷ್ಟ್ರೀಯ ಹಿರಿಮೆಯ ಪ್ರಜ್ಞೆ ಹೆಚ್ಚಿಸಲು ಪ್ರತಿಯೊಂದು ಶಾಲೆ-ಕಾಲೇಜು ಎನ್ ಸಿಸಿ ಹೊಂದಬೇಕಾಗಿದೆ.

SCROLL FOR NEXT