ದೇಶ

ಜೆಎನ್ ಯು, ಜಾಮಿಯಾ ವಿವಿಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದವರಿಗೆ ಶೇ. 10 ರಷ್ಟು ಮೀಸಲಾತಿ ಬೇಕು-ಕೇಂದ್ರ ಸಚಿವ

Nagaraja AB

ಮೀರತ್ : ಪಶ್ಚಿಮ ಉತ್ತರ ಪ್ರದೇಶದ ಅಭ್ಯರ್ಥಿಗಳಿಗೆ ಜವಹರ್ ಲಾಲ್ ನೆಹರು ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಶೇಕಡಾ 10 ರಷ್ಟು ಮೀಸಲಾತಿ ನೀಡಿದರೆ ಯಾರೂ ಕೂಡಾ ರಾಷ್ಟ್ರ ವಿರೋಧಿ ಘೋಷಣೆ ಕೂಗುವುದಿಲ್ಲ ಎಂದು ಕೇಂದ್ರ ಸಚಿವ ಸಂಜೀವ್ ಬಾಲ್ಯನ್ ಹೇಳಿದ್ದಾರೆ.

ಬುಧವಾರ ಪೌರತ್ವ ತಿದ್ದುಪಡಿ ಕಾಯ್ದೆ ಪರವಾದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಕಾಯ್ದೆ ಜಾರಿಗೆ ಬಂದ ನಂತರ ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್ ನಗರ, ಮೀರತ್ ಅಥವಾ ಬಿಜ್ನೋರ್ ನಲ್ಲಿ ಶಾಂತಿ ಇಲ್ಲದಂತಾಗಿದೆ ಎಂದರು.

ಈ ಅಭ್ಯರ್ಥಿಗಳು ಏಲ್ಲಿದ್ದಾರೆ? ಏಕೆ ಅವರು ಬೀದಿಗಿಳಿಯಲ್ಲ ಎಂದು ಪ್ರಶ್ನಿಸಿದ ಬ್ಯಾಲನ್, ಜೆನ್ ಯು ಹಾಗೂ ಜಾಮಿಯಾ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ  ಸಿಎಎ ಬೆಂಬಲಿಸುವ ಮೀರತ್ ಕಾಲೇಜ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.

ಜೆಎನ್ ಯು, ಜಾಮಿಯಾ ವಿಶ್ವವಿದ್ಯಾಲಯಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದವರಿಗೆ ಶೇಕಡಾ 10 ರಷ್ಟು ಮೀಸಲಾತಿ ಕಲ್ಪಿಸುವಂತೆ  ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.

SCROLL FOR NEXT