ದೇಶ

ರಾಷ್ಟ್ರೀಯ ಮತದಾರರ ದಿನ: ಜನತೆಗೆ ಪ್ರಧಾನಿ ಶುಭಾಶಯ

Sumana Upadhyaya

ನವದೆಹಲಿ: ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶನಿವಾರ ಶುಭಾಶಯ ಕೋರಿದ್ದಾರೆ.


‘ಚುನಾವಣಾ ಪ್ರಕ್ರಿಯೆಗಳು ಸುಗಮಗೊಳಿಸಿ ಎಲ್ಲರೂ ಪಾಲ್ಗೊಳ್ಳುವಂತೆ ಪ್ರಯತ್ನಗಳನ್ನು ಮಾಡುತ್ತಿರುವ ಚುನಾವಣಾ ಆಯೋಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಈ ದಿನ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾರರ ಜಾಗೃತಿ ಮತ್ತು ಮತದಾನ ಪ್ರಮಾಣ ಏರಿಕೆಯಾಗುವಂತೆ ನಮ್ಮನ್ನು ಪ್ರೇರೇಪಿಸಲಿ ಎಂದು ಪ್ರಧಾನಿ ಹೇಳಿದ್ದಾರೆ.


ಕಳೆದ 10 ವರ್ಷಗಳಿಂದ ಚುನಾವಣಾ ಆಯೋಗ ಪ್ರತಿವರ್ಷ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸುತ್ತಿದೆ. ಚುನಾವಣಾ ಆಯೋಗ ಭಾರತದಲ್ಲಿ ಸ್ಥಾಪನೆಯಾಗಿದ್ದು 1950ರ ಜನವರಿ 25ರಂದು ಅಂದರೆ ಗಣರಾಜ್ಯೋತ್ಸವಕ್ಕೆ ಒಂದು ದಿನ ಮೊದಲು.

SCROLL FOR NEXT