ದೇಶ

ಕೊರೋನಾ ವೈರಸ್ ಭೀತಿ: ಏಳಕ್ಕೂ ಹೆಚ್ಚು ಜನರು ಅಬ್ಸರ್ವೆಷನಲ್ಲಿದ್ದಾರೆ- ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಕೊರೋನಾ ವೈರಸ್ ಭೀತಿ  ಹಿನ್ನೆಲೆಯಲ್ಲಿ  ಚೀನಾದಿಂದ ಆಗಮಿಸಿದ ಏಳಕ್ಕೂ ಹೆಚ್ಚು ಜನರನ್ನು ವೈದ್ಯಕೀಯ ಅಬ್ಸರ್ವೆಷನಲ್ಲಿ ಇರಿಸಲಾಗಿದೆ. ಆದಾಗ್ಯೂ, ದೇಶದಲ್ಲಿ ಕೊರೋನಾ ವೈರಸ್  ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಇಂದು ತಿಳಿಸಿದ್ದಾರೆ.

ಈ ಏಳು  ಪ್ರಯಾಣಿಕರ ರಕ್ತದ ಮಾದರಿಯನ್ನು ಪುಣೆಯ ಐಸಿಎಂಆರ್- ನೀವ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ, ಕೊಲ್ಕತ್ತಾ, ಮುಂಬೈ, ಚೆನ್ನೈ, ಬೆಂಗಳೂರು, ಹೈದ್ರಾಬಾದ್ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಿಗೆ ಬಹು ಶಿಸ್ತಿನ ಕೇಂದ್ರ ತಂಡವನ್ನು ಕಳುಹಿಸಲು ಕೇಂದ್ರ ಆರೋಗ್ಯ ಸಚಿವರು ನಿರ್ದೇಶನ ನೀಡಿದ್ದಾರೆ.

ದೇಶದಲ್ಲಿ ಕೊರೋನಾ ವೈರಸ್  ಕುರಿತ ಮುನ್ನೆಚ್ಚರಿಕಾ ಹಾಗೂ ನಿರ್ವಹಣಾ ಕುರಿತು  ಪರಿಶೀಲನಾ ಸಭೆ ನಡೆಸಿದ ಹರ್ಷವರ್ಧನ್,  ನೇಪಾಳದಲ್ಲಿ ಪ್ರಕರಣವೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ನೆರವು ನೀಡುವುದಾಗಿ ಉತ್ತರ್ ಖಂಡ್ ಮುಖ್ಯಮಂತ್ರಿಗಳಿಗೆ  ಭರವಸೆ ನೀಡಿದ್ದಾರೆ.

ಚೀನಾದಿಂದ ಇತ್ತೀಚಿಗೆ ಆಗಮಿಸಿದ ಕೇರಳದ ಏಳು, ಮುಂಬೈನ ಇಬ್ಬರು, ಬೆಂಗಳೂರು ಹಾಗೂ ಹೈದ್ರಾಬಾದಿನ ತಲಾ ಒಬ್ಬರು ಪ್ರಯಾಣಿಕರನ್ನು ಕೊರೋನಾ ವೈರಸ್ ಭೀತಿ  ಹಿನ್ನೆಲೆಯಲ್ಲಿ ವೈದ್ಯಕೀಯ ಅಬ್ಸರ್ವೆಷನಲ್ಲಿ ಇರಿಸಲಾಗಿದೆ

SCROLL FOR NEXT