ಸಂಗ್ರಹ ಚಿತ್ರ 
ದೇಶ

ಫೆ.8ರಂದು ದೆಹಲಿ ಜನ ಪ್ರೀತಿಯಿಂದ ಮತಯಂತ್ರದ ಬಟನ್ ಒತ್ತಲಿದ್ದಾರೆ: ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಟಾಂಗ್

ಫೆಬ್ರವರಿ 8ರಂದು ದೆಹಲಿ ಜನತೆ ಪ್ರೀತಿಯಿಂದ ಮತಯಂತ್ರದ ಬಟನ್ ಒತ್ತಲ್ಲಿದ್ದಾರೆ ಎಂದು ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ನವದೆಹಲಿ: ಫೆಬ್ರವರಿ 8ರಂದು ದೆಹಲಿ ಜನತೆ ಪ್ರೀತಿಯಿಂದ ಮತಯಂತ್ರದ ಬಟನ್ ಒತ್ತಲ್ಲಿದ್ದಾರೆ ಎಂದು ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಮುಂದುವರೆದಿದೆ. ಈ ಹಿಂದೆ ಸಿಎಎ ವಿಚಾರವಾಗಿ ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಅಮಿತ್ ಶಾ ವಿರುದ್ಧ ಕಿಡಿಕಾರಿದ್ದ ಪ್ರಶಾಂತ್ ಕಿಶೋರ್ ಅವರು ಇದೀಗ ದೆಹಲಿ ಚುನಾವಣೆ ಕುರಿತಂತೆ ಅಮಿತ್ ಶಾ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

'ಫೆಬ್ರವರಿ 8ರಂದು ದೆಹಲಿ ಜನತೆ ಪ್ರೀತಿಯಿಂದ ಮತಯಂತ್ರದ ಬಟನ್ ಒತ್ತಲ್ಲಿದ್ದಾರೆ. ಸಣ್ಣ ಪ್ರಮಾಣದಲ್ಲಿ ದೊಡ್ಡ ಆಘಾತಕ್ಕೆ ಸಿದ್ಧರಾಗಿ. ಸಹೋದರತ್ವ ಮತ್ತು ಒಗ್ಗಟ್ಟು ಅಳಿವಿನಂಚಿನಲ್ಲಿಲ್ಲ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಭಾನುವಾರ ದಹೆಲಿಯಲ್ಲಿ ಚುನಾವಣಾ ಭಾಷಣ ಮಾಡಿದ್ದ ಅಮಿತ್ ಶಾ ಅವರು, ಶಾಹೀನ್ ಬಾಗ್ ಪ್ರತಿಭಟನೆ ಹೊರತಾಗಿಯೂ ದೆಹಲಿ ಜನತೆ ಬಿಜೆಪಿ ಪರವಾಗಿ ಮತದಾನ ಮಾಡಲಿದ್ದಾರೆ ಎಂದು ಹೇಳಿದ್ದರು.

ಬಿಜೆಪಿ ಸರ್ಕಾರದ ಸಿಎಎ ಕಾಯ್ದೆಯನ್ನು ವಿರೋಧಿಸಿದ್ದ ಪ್ರಶಾಂತ್ ಕಿಶೋರ್ ಅದನ್ನು ರಾಜ್ಯಸಭೆಯಲ್ಲಿ ಬೆಂಬಲಿಸಿದ್ದ ತಮ್ಮದೇ ಪಕ್ಷದ ಕಾರ್ಯ ವೈಖರಿ ಕುರಿತೂ ಟೀಕೆ ಮಾಡಿ ಸುದ್ದಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT